Monday, December 23, 2024

ನಟ ಸುದೀಪ್​, ನಿರ್ಮಾಪಕ ಕುಮಾರ್​ ಮಧ್ಯೆ ವಾರ್​​.!: ಸುದೀಪ್​​ ಪರ ಜಾಕ್​ ಮಂಜು ಬ್ಯಾಟಿಂಗ್​

ಬೆಂಗಳೂರು: ಚಿತ್ರರಂಗದಲ್ಲಿ ನಟ ಸುದೀಪ್ ಒಳ್ಳೆಯ ಕೆಲಸ ಮಾಡುತ್ತಿದ್ದು ನಿರ್ಮಾಪಕರಿಗೂ, ಜನರಿಗೂ ಸಹ ಸಹಾಯ ಮಾಡುತ್ತಿದ್ದಾರೆ ನಿರ್ಮಾಪಕ ಎನ್.ಎಂ ಕುಮಾರ್ ಮಾಡುತ್ತಿರುವ ಆರೋಪ ಸುಳ್ಳು ಎಂದು ಜಾಕ್ ಮಂಜು ತಿರುಗೇಟು ನೀಡಿದರು.

ಇದನ್ನೂ ಓದಿ: ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ ತರುವ ಚಿಂತನೆ : ಸಿದ್ದರಾಮಯ್ಯ

ನಗರದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಟ ಸುದೀಪ್ ವಿರುದ್ದ ಹಣ ಪಡೆದು ಚಿತ್ರದಲ್ಲಿ ನಟಿಸದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ನಿರ್ಮಾಪಕ ಎನ್.ಎಮ್​ ಕುಮಾರ್​ ಆರೋಪ ಮಾಡಿದ್ದರು. ಇದೆಲ್ಲಾ ಸುಳ್ಳು ಸುದೀಪ್ ಮೇಲೆ ಈವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲ.

ಈ ಹಿಂದೆ ಉತ್ತರ ನೀಡುವಂತೆ ಕೋರಿ ಐದಾರು ಪತ್ರಗಳನ್ನು ಬರೆದಿದ್ದೆವು ಆದರೇ ಉತ್ತರ ನೀಡಿಲ್ಲ ಎಂಬ ಎನ್.ಎಂ.ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಿರ್ಮಾಪಕರು ಕಳಿಸಿದ್ದ ಮೊದಲ ಪತ್ರಕ್ಕೆ ಉತ್ತರ ನೀಡಿದ್ದೇವೆ, ಮೊದಲ ಪತ್ರವನ್ನೇ ನಾಲ್ಕೈದು ಸಲ ನೀಡಿದ್ದಾರೆ. ಒಂದು ಸಲ ಉತ್ತರ ನೀಡಿದ ಮೇಲೆ ಮತ್ತೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ಮುಕುಂದ ಮುರಾರಿ ಸಿನಿಮಾ ರಿಲೀಸ್ ಆದ 8 ದಿನಕ್ಕೆ ಕೊವಿಡ್ ಆರಂಭವಾಗಿ ಆ ಸಿನಿಮಾ ಲಾಸ್ ಆಗಿತ್ತು, ಅಷ್ಟರಲ್ಲಿ ಮತ್ತೊಂದು ಸಿನಿಮಾಗೆ ಸುದೀಪ್ ಮಾತುಕತೆ ನಡೆದಿರುತ್ತದೇ, ಈ ವೇಳೆ ಕುಮಾರ್ ಸುದೀಪ್ ಅವರನ್ನು ಅಪ್ರೋಚ್​​​ ಮಾಡುತ್ತಾರೆ ಆ ಬಳಿಕ ಸುದೀಪ್ ಸಿನಿಮಾ ನಿರ್ದೇಶನಕ್ಕೆ ಒಬ್ಬ ನಿರ್ದೇಶಕನನ್ನು ಕಳುಹಿಸುತ್ತಾರೆಮ ನಿರ್ದೇಶಕನ ಸಂಭಾವನೆ ಹೆಚ್ಚು ಎಂದು ಕುಮಾರ್ ಒಪ್ಪಿಕೊಳ್ಳುವುದಿಲ್ಲ.

ಒಂದು ಸಿನಿಮಾಗೆ 50 ರಿಂದ 60 ಕೋಟಿ ಬಜೆಟ್​ ಆಗುತ್ತದೆ, ​ ಕಂಪನಿಗೆ 70%, ನಿರ್ಮಾಪಕನಿಗೆ 30% ಎಂದು ಮಾತುಕತೆ ಆಡಿ ಮುಗಿಸಿದ್ದೆವು. ಆರಂಭದಲ್ಲಿ ಇದಕ್ಕೆಲ್ಲಾ ಒಪ್ಪಿಕೊಂಡ ಕುಮಾರ್, ಆ ಬಳಿಕ ಉಲ್ಟಾ ಹೋಡಿದಿದ್ದಾರೆ. ಅದೇ ಸುದೀಪ್ ಜೊತೆ ಕುಮಾರ್ ಕೊನೆ ಮೀಟಿಂಗ್ ಎಂದು ನಿರ್ಮಾಪಕ ಕುಮಾರ್ ಆರೋಪಕ್ಕೆ ಉತ್ತರ ನೀಡಿದರು.

RELATED ARTICLES

Related Articles

TRENDING ARTICLES