Sunday, December 22, 2024

RRR ರೆಕಾರ್ಡ್ ಬ್ರೇಕ್ ಮಾಡೋಕೆ KGF ಟೀಂ ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಮಲೇಷಿಯಾ, ಜಪಾನ್ ಟೂರ್​​ನಲ್ಲಿರುವ ನಟ ಯಶ್, ಜಾಪನೀಸ್ ಭಾಷೆಯಲ್ಲಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಾನು ನಿಮ್ಮ ಹತ್ತಿರದ ಥಿಯೇಟರ್​ಗಳಿಗೆ ಬರ್ತಿದ್ದೀನಿ, ಫಾಸ್ಟನ್ ಯುವರ್ ಸೀಟ್ ಬೆಲ್ಟ್ ಅಂತಲೂ ಮೆಸೇಜ್ ಕೊಟ್ಟಿದ್ದಾರೆ. ಕೆಜಿಎಫ್ ಚಾಪ್ಟರ್-1 ಹಾಗೂ ಚಾಪ್ಟರ್-2 ಒಟ್ಟೊಟ್ಟಿಗೆ ಜಪಾನ್ ಬಾಕ್ಸ್ ಆಫೀಸ್ ರೂಲ್ ಮಾಡೋಕೆ ಸಜ್ಜಾಗಿವೆ.

ಸದ್ಯ ಮಲೇಷಿಯಾ ಹಾಗೂ ಜಪಾನ್ ಟೂರ್​​ನಲ್ಲಿರೋ ನಟ ಯಶ್ ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಷ್ಟೇ ಅಲ್ಲ, ಜಾಪನೀಸ್ ಭಾಷೆಯಲ್ಲೇ ಯಶ್ ಮಾತನಾಡೋ ಮೂಲಕ ಅಚ್ಚರಿ ಕೂಡ ಮೂಡಿಸಿದ್ದಾರೆ. ಫಾಸ್ಟನ್ ಯುವರ್ ಸೀಟ್​ ಬೆಲ್ಟ್ ಅಂತಿರೋ ಯಶ್, ಜಪಾನ್ ಮಂದಿಗೆ ಕೆಜಿಎಫ್ ಸಿನಿಮಾಗಳು ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರ್ತಿವೆ ಎಂದು ವಿಡಿಯೋ ಮೆಸೇಜ್ ನೀಡಿದ್ದಾರೆ.

ಇದನ್ನೂ ಓದಿ : ‘ವೀರ ಸಿಂಧೂರ ಲಕ್ಷ್ಮಣ’ ಕನ್ಫರ್ಮ್ : ದರ್ಶನ್-ಉಮಾಪತಿ ಕಾಂಬೋನಲ್ಲಿ 2024ಕ್ಕೆ ಶೂಟಿಂಗ್ ಶುರು?

ಮಲೇಷಿಯಾ, ಜಪಾನ್​ನಲ್ಲಿ ಬೀಡು

ಕೆಜಿಎಫ್ ಸರಣಿ ಚಿತ್ರಗಳು ಜಾಪನೀಸ್ ಭಾಷೆಯಲ್ಲಿ ರಿಲೀಸ್ ಆಗ್ತಿವೆ. ಹಾಗಾಗಿ ಅಲ್ಲಿ ದೊಡ್ಡ ಮಟ್ಟದಲ್ಲಿ ಪ್ರಮೋಷನ್ಸ್ ಮಾಡುವ ನಿಟ್ಟಿನಲ್ಲಿ ಪಾನಿಪುರಿ ಕಿಟ್ಟಿ, ರಾಕೇಶ್, ಚೇತನ್ ಸೇರಿದಂತೆ ಆತ್ಮೀಯ ಗೆಳೆಯರ ಜೊತೆಗೂಡಿ ಯಶ್ ಮಲೇಷಿಯಾ, ಜಪಾನ್​ನಲ್ಲಿ ಬೀಡು ಬಿಟ್ಟಿದ್ದಾರೆ.

RRR ರೆಕಾರ್ಡ್​ ಬ್ರೇಕ್ ಗೆ ಪ್ಲ್ಯಾನ್ಸ್

ಶಕ್ತಿ, ಧೈರ್ಯ, ದೃಢ ಸಂಕಲ್ಪಗಳಿರೋ ಈ ಮಾಸ್ ಌಕ್ಷನ್ ಎಂಟರ್​ಟೈನರ್ ನಿಮ್ಮನ್ನು ರಂಜಿಸಲಿದೆ ಅಂತ ಯಶ್ ಹೇಳಿದ್ದಾರೆ. ಆ ಮೂಲಕ ಜಪಾನ್ ಮಂದಿಯ ದಿಲ್ ದೋಚಲು ಸಿದ್ದರಾಗಿದ್ದಾರೆ. ಅಲ್ಲದೆ, ಇತ್ತೀಚೆಗೆ ಜಪಾನ್​ನಲ್ಲಿ ತೆರೆಕಂಡು ಬಹುದೊಡ್ಡ ಮೊತ್ತ ಗಳಿಸಿದ ರಾಜಮೌಳಿಯ ತ್ರಿಬಲ್ ಆರ್ ಸಿನಿಮಾಗಿಂತ ಹೆಚ್ಚಿನ ಬ್ಯುಸಿನೆಸ್ ಮಾಡುವುದಕ್ಕಿ ಯಶ್ ಮಾಸ್ಟರ್ ಪ್ಲ್ಯಾನ್ಸ್ ರೂಪಿಸಿದ್ದಾರೆ.

ಇದೇ ಜುಲೈ 14ಕ್ಕೆ ಕೆಜಿಎಫ್ ಸಿನಿಮಾಗಳು ಜಪಾನ್​​ನಲ್ಲಿ ಬಿಡುಗಡೆ ಆಗುತ್ತಿದ್ದು, ಬಾಕ್ಸ್ ಆಫೀಸ್ ರೂಲ್ ಮಾಡೋದು ಪಕ್ಕಾ ಆಗಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES