Wednesday, January 22, 2025

ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ, ಗಂಭೀರ ಗಾಯ : ಸಿಸಿಟಿಯಲ್ಲಿ ದೃಶ್ಯ ಸೆರೆ

ಬೆಂಗಳೂರು : ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿರುವ ಘಟನೆ ಯಲಹಂಕದ ಅನಂತಪುರ ಗೇಟ್​ ಬಳಿ ಶುಕ್ರವಾರ ನಡೆದಿದೆ.

ಇದನ್ನೂ ಓದಿ: ಸರ್ಕಾರದ ದ್ರಾಕ್ಷಿ, ಗೋಡಂಬಿ ತಿನ್ನೋಕ್ ಬಂದಿದ್ದೀರಾ? ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕ್ಲಾಸ್

ರಾಮಗೊಂಡನಹಳ್ಳಿ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿ, ಇದೇ  ವೇಳೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಎದುರು ಬಂದ ಯುವಕರು ನೋಡ ನೋಡುತ್ತಿದ್ದಂತೆ ವಿದ್ಯಾರ್ಥಿನಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗಳಾಗಿವೆ.

ಯಲಹಂಕ ತಾಲೂಕಿನ ಅನಂತಪುರದಲ್ಲಿ ಜುಲೈ 7 ಶುಕ್ರವಾರ ಸಂಜೆ ನಡೆದಿರೋ ಅಪಘಾತ, ಡಿಕ್ಕಿ ರಭಸಕ್ಕೆ ಪರಸ್ಪರರು ಹಾರಿಬಿದ್ದ ಭಯಾನಕ ದೃಶ್ಯ ಸಿಸಿಟಿವಿಲಿ ಸೆರೆಯಾಗಿದ್ದು ಗಾಯಾಳು ವಿದ್ಯಾರ್ಥಿನಿ ಹಾಗೂ ಯುವಕರನ್ನ ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಯೂ ಯಲಹಂಕ‌ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES