Wednesday, January 22, 2025

ವಿವಾಹ ವಾರ್ಷಿಕೋತ್ಸವ ದಿನದಂದೇ ಸ್ನೇಹಿತನನ್ನು ಹತ್ಯೆಗೈದ ಕಿರಾತಕರು

ಬೆಂಗಳೂರು: ವಿವಾಹ ವಾರ್ಷಿಕೋತ್ಸವ ದಿನದಂದೇ ಕೊಲೆ ಮಾಡಿರುವ ಘಟನೆ ಚನ್ನನಾಯಕನಪಾಳ್ಯದಲ್ಲಿ ಘಟನೆ ನಡೆದಿದೆ.
ಹೌದು, ಹೆಗ್ಗನಹಳ್ಳಿ ನಿವಾಸಿ ಅನಂದ್ ಎಂಬವರನ್ನು ಕೊಲೆ ಮಾಡಲಾಗಿತ್ತು. ಈತ ತಮಿಳುನಾಡು ಮೂಲದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.

ತನ್ನ ಸ್ನೇಹಿತರ ಜೊತೆ ವಾಸವಾಗಿದ್ದ ಆನಂದ್ ಆರೋಪಿ ಸತೀಶ್ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ.ಇತ್ತೀಚೆಗೆ ಆನಂದನೇ ಸ್ವಂತ ಅಡುಗೆ ಕಂಟ್ರಾಕ್ಟ್ ಆರಂಭಿಸಿದ್ದ. ಇದರಿಂದ ಸತೀಶನ ವಹಿವಾಟಿಗೆ ಹೊಡೆತ ಬಿದ್ದಿತ್ತು. ಹೀಗಾಗಿ ಆನಂದನನ್ನು ಮುಗಿಸಲು ಸತೀಶ್ ತೀರ್ಮಾನಿಸಿದ್ದನು.

ಇದನ್ನೂ ಓದಿ : ಶಿಕ್ಷಕರ ಪೈಟ್​ಗೆ ಹೆದರಿ ಶಾಲೆ ಬಿಟ್ಟ ಸ್ಟೂಡೆಂಟ್ಸ್!

ಪಾರ್ಟಿ ನೆಪದಲ್ಲಿ ಆನಂದನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಸತೀಶ್ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಲುವಾಗಿ ತನ್ನ ಹೆಂಡತಿ ಪವಿತ್ರಾಳನ್ನು ಆನಂದ ತಮಿಳುನಾಡಿನಿಂದ ಕರೆಸಿದ್ದ ಆಕೆ ಬೆಂಗಳೂರಿಗೆ ಬರುವಷ್ಟರಲ್ಲಿ ಆರೋಪಿಗಳು ಈತನ ಜೀವವನ್ನೇ ತೆಗೆದಿದ್ದಾರೆ.

ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಪೀಣ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES