Sunday, December 22, 2024

ಅರ್ಚಕ ಕೆಲ್ಸದಿಂದ ತೆಗೆದಿದ್ದಕ್ಕೆ ನದಿ ಮಧ್ಯೆ ಜೋಕಾಲಿ ಕಟ್ಟಿ ಧರಣಿ ಕೂತ ಪೂಜಾರಿ!

ಬೆಳಗಾವಿ : ಅರ್ಚಕ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪೂಜಾರಿಯೊಬ್ಬ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಧರಣಿ ಕುಳಿತುಕೊಂಡಿರುವ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರಿಯಾಣ ಮೂಲದ ದೇವೇಂದ್ರ ಸಿಂಗ್ ಶರ್ಮಾ ಎಂಬಾತನೇ ಧರಣಿ ಕೂತಿರುವ ಪೂಜಾರಿ.

ಹಬ್ಬಾನಟ್ಟಿ ಗ್ರಾಮದ ಮಾರುತಿ ದೇವಾಲಯಕ್ಕೆ ನಿತ್ಯ ಪೂಜೆ, ಧಾರ್ಮಿಕ ಕೆಲಸಕ್ಕೆಂದು ದೇವೇಂದ್ರ ಸಿಂಗ್ ಅವರನ್ನು ನೇಮಕ ಮಾಡಲಾಗಿತ್ತು. ಇವರು ಕಳೆದೆರಡು ತಿಂಗಳಿಂದ ಪೂಜಾ ಕೈಂಕರ್ಯ ಮುಂದುವರಿಸಿದ್ದರು. ಆದರೆ, ಗ್ರಾಮಸ್ಥರು ಏಕಾಏಕಿ ಪೂಜೆ ಪುರಸ್ಕಾರ ಇಷ್ಟ ಆಗುತ್ತಿಲ್ಲ ಅಂತ ದೇವೇಂದ್ರನನ್ನ ಕೆಲಸದಿಂದ ಬಿಡಿಸಿದ್ದರು.

ನ್ಯಾಯ ಕೊಡಿ ಅಂತ ರಚ್ಚೆ ಹಿಡಿದ ಪೂಜಾರಿ

ಇದಕ್ಕೆ ಅಸಮಾಧಾನಗೊಂಡ ದೇವೇಂದ್ರ ಸಿಂಗ್ ನದಿಯಲ್ಲಿ ಧರಣಿ ಕೂತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ನೀಡಿದ ಭರವಸೆಯಿಂದ ಕುಟುಂಬ ಸಮೇತ ಬಂದಿದ್ದೇನೆ. ಏಕಾಏಕಿ ಕೆಲಸದಿಂದ ಬಿಡಿಸಿದರೆ ಹೇಗೆ ಜೀವನ ಸಾಗಿಸಬೇಕು. ತನಗೆ ನ್ಯಾಯ ಬೇಕು ಅಂತ ರಚ್ಚೆ ಹಿಡಿದಿದ್ದಾನೆ.

ಇದನ್ನು ಓದಿ: ವಿಪಕ್ಷ ನಾಯಕನ ಆಯ್ಕೆ ವಿಳಂಬದಿಂದ ಪಕ್ಷಕ್ಕೆ ಮುಜುಗರ : ಬೇಸರ ಹೊರಹಾಕಿದ ರವಿಕುಮಾರ್

ವ್ಯವಹಾರ ಬಗೆಹರಿಸದಿದ್ರೆ ಮಳೆ ಆಗಲ್ಲ

ಮಲಪ್ರಭಾ ನದಿಯಲ್ಲಿ‌ನ ಮರಕ್ಕೆ ಜೋಕಾಲಿ ಕಟ್ಟಿ ಧರಣಿ ಮುಂದುವರಿಸಿದ್ದಾರೆ. ಅಲ್ಲದೆ, ತನ್ನನ್ನು ವಾಪಾಸ್ ಕೆಲಸಕ್ಕೆ ಸೆರಿಸಿಕೊಳ್ಳಿ. ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ನನ್ನ ವ್ಯವಹಾರ ಬಗೆಹರಿಸುವವರೆಗೂ ಮಳೆ ಆಗುವುದಿಲ್ಲ ಅಂತ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಖಾನಾಪೂರ ಪೋಲಿಸರು, ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸ್ಥಳೀಯರು ನದಿಯ ನಡುಗಡ್ಡೆಯಲ್ಲಿ ಧರಣಿ ಕುಳಿತ ಅರ್ಚಕನ್ನು ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ. ನದಿ ದಡದಲ್ಲಿ ನಿಂತು ಹೊರ ಬರುವಂತೆ ಮನವಿ ಮಾಡಿದರೂ ಈತ ತನ್ನ ಹಠ ಬಿಟ್ಟಿಲ್ಲ. ಹೀಗಾಗಿ, ಅಗ್ನಿಶಾಮಕ ದಳ ಕರೆಸಿ ರಕ್ಷಣೆ ಮಾಡಲು ಪೋಲಿಸರು ತಯಾರಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES