ಮಂಗಳೂರು: ಜಡೆ ಜಗಳಕ್ಕೆ ಬೇಸತ್ತು ವಿದ್ಯಾರ್ಥಿಗಳು ಬೇರೆ ಶಾಲೆಗೆ ಶಿಫ್ಟ್ ಆಗಿರುವ ಘಟನೆ ಬೆಳ್ತಂಗಡಿಯ ಸೋಣಂದೂರು ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ .
ಹೌದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೋಣಂದೂರು ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರಲಿದ್ದು, ಶಾಲೆಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಾಲೆಯಲ್ಲಿ 37 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆಯ ಮೂವರು ಶಿಕ್ಷಕಿಯರಾದ ರೀನಾ, ಟೀನಾ, ಜೆಸಿಂತಾ ನಡುವೆ ಆಗಾಗ ಜಗಳ ನಡೆಯುತಿತ್ತು. ಶಿಕ್ಷಕಿಯರ ಜಗಳದಿಂದ ಬೇಸತ್ತು ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ತೆರಳಿದ್ದು, ಈಗ ಇಡೀ ಶಾಲೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
ಇದನ್ನೂ ಓದಿ: ಇದೊಂದು ಜನ ವಿರೋಧಿ ಬಜೆಟ್ : ಬಸವರಾಜ ಬೊಮ್ಮಾಯಿ ಕಿಡಿ
ಶಾಲೆಯನ್ನು ಕಳೆದ ಒಂದು ವರ್ಷದಿಂದ ಮಂಗಳೂರಿನ ಎವಿ ಫೌಂಡೇಶನ್ ದತ್ತು ಪಡೆದಿದೆ. ಗಾಯಕ ಅರವಿಂದ್ ವಿವೇಕ್ ನೇತೃತ್ವದ ಫೌಂಡೇಶನ್ ಇದಾಗಿದ್ದು, ಶಾಲೆಯ ಅಭಿವೃದ್ಧಿಯನ್ನು ಎವಿ ಫೌಂಡೇಶನ್ ಮಾಡಿದೆ. ಅಲ್ಲದೇ ಎವಿ ಫೌಂಡೇಶನ್ನಿಂದ ಶಾಲೆಗೆ ಇಬ್ಬರು ಶಿಕ್ಷಕಿಯರನ್ನು ನೀಡಲಾಗಿತ್ತು. ಕಾಲ ಕ್ರಮೇಣ ಈ ಶಿಕ್ಷಕಿಯರ ಜೊತೆಗೂ ಮೂವರು ಶಿಕ್ಷಕಿಯರು ಜಗಳ ಕಾದಿದ್ದಾರೆ.
ಶಿಕ್ಷಕಿಯರ ಜಗಳಕ್ಕೆ ಮೊದಲು ಇಬ್ಬರು ಶಿಕ್ಷಕರು ಶಾಲೆ ಬಿಟ್ಟಿದ್ದು, ಈಗ ಮಕ್ಕಳೂ ಅಕ್ಕಪಕ್ಕದ ಶಾಲೆಗಳಿಗೆ ಶಿಫ್ಟ್ ಆಗಿದ್ದಾರೆ.