Monday, December 23, 2024

ಬಿಜೆಪಿ ಅವಧಿಯಲ್ಲಿ ಮಾರಲ್ ಪೋಲಿಸಿಂಗ್ ನಡೆದಿತ್ತು : ಸಿದ್ದರಾಮಯ್ಯ

ಬೆಂಗಳೂರು : ಹಿಂದಿನ ಸರ್ಕಾರದ ಅವಧಿಯಲ್ಲಿ ಮಾರಲ್ ಪೋಲಿಸಿಂಗ್ ನಡೆದಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ ಹಾಗೂ ಸಿಎಂ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅದು ಮಾರಲ್ ಪೋಲಿಸಿಂಗ್ ಅಲ್ಲ. ಇಮ್ಮಾರಲ್ ಪೋಲಿಸಿಂಗ್ ಎಂದರು.

ನಾನು ಈಗಾಗಲೇ ಈ ವಿಚಾರದಲ್ಲಿ ಅದನ್ನು ಸ್ಪಷ್ಟಪಡಿಸಿದ್ದೇನೆ. ನೈತಿಕ ಪೋಲಿಸ್‌ಗಿರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಶಾಂತಿಯ ತೋಟವಾಗಬೇಕು ಅಂದ್ರೆ ಸಮಾನ ಸಮಾಜ ಸೃಷ್ಟಿಯಾಗ ಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಸೃಷ್ಟಿಸಲು ಪ್ರಯತ್ನಿಸುತ್ತೇವೆ ಎಂದರು ತಿಳಸಿದರು.

ಇದನ್ನೂ ಓದಿ : ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಅಪ್ರಬುದ್ಧರು : ಪ್ರಲ್ಹಾದ್ ಜೋಶಿ

ವಿದ್ಯಾರ್ಥಿಗಳು ಜಾತಿವಾದಿಗಳಾಗ್ತಿದ್ದಾರೆ

ನಾವು ಅಧಿಕಾರಕ್ಕೆ ಬರುವ ಮೊದಲು ಪಠ್ಯ ತಿರುಚಿದ್ರು. ಅದನ್ನು ತಾತ್ಕಾಲಿಕವಾಗಿ ಭೋದನೆ ಮಾಡದಿರಲು ಸೂಚಿಸಿದ್ದೇನೆ. ಒಂದು ಕಮಿಟಿ ಮಾಡಿದ್ದೇನೆ. ವಿದ್ಯಾರ್ಥಿಗಳು ಹೆಚ್ಚು ಜಾತಿವಾದಿಗಳು ಆಗ್ತಿದ್ದಾರೆ. ಮೌಢ್ಯಾಚರಣೆಗೆ ಒಳಗಾಗ್ತಿದ್ದಾರೆ. ಶಿಕ್ಷೆ ಮೂಲಕ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ. ಜಾತ್ಯಾತೀತ ರಾಷ್ಟ್ರ ಮಾಡಬೇಕಿದೆ. ಜಾತಿ ಸೋಂಕು ತಗುಲಿದ್ರೆ, ಜಾತ್ಯಾತೀತ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದರು.

ಬೋಧಕರೇ ಜಾತ್ಯಾತೀತ ಅಲ್ಲದಿದ್ರೆ!

ಬೋಧಕರು ಜಾತ್ಯಾತೀತವಾಗಿ ಇರುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಬೋಧಕರೇ ಜಾತ್ಯಾತೀತ ಅಲ್ಲದಿದ್ರೆ ಮಕ್ಕಳಿಗೆ ಹೇಗೆ ಶಿಕ್ಷಣ ನೀಡಲು ಸಾಧ್ಯ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡ್ರೆ ಜಾತ್ಯಾತೀತ ಸಾಧ್ಯವಿಲ್ಲ. ಪಠ್ಯಪುಸ್ತಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಸಾಮಾಜಿಕ ಜವಾಬ್ದಾರಿಯುತ ಮಕ್ಕಳ ತಯಾರಿ ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES