Thursday, April 3, 2025

ನಾನು ಮಾಂಸ‌ ತಿಂತೀನಿ, ನೀವು ಬೇಡ ಅಂದ್ರೂ ನಿಲ್ಲಿಸಲ್ಲ : ಕೆ.ಎನ್ ರಾಜಣ್ಣ

ಮೈಸೂರು : ನಾನು ಮಾಂಸ‌ ತಿನ್ನುತ್ತೇನೆ, ನೀವು ಬೇಡ ಅಂದರೆ ನಿಲ್ಲಿಸುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು.

ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಏನು ನಡೆದುಕೊಂಡು ಬಂದಿದೆ, ಅದು ಸರಿ ಇದೆ ಎಂದರು.

ಗೋ ಹತ್ಯೆ ಎನ್ನುವುದು ಅತ್ಯಂತ ಸೂಕ್ಷ್ಮ ವಿಚಾರ. ಹಸು ಕಡಿಯಬೇಕು ಅಂತ ಹೇಳುವುದಿಲ್ಲ. ಕಡಿಯಬಾರದು ಅಂತ ಹೇಳುವುದಿಲ್ಲ. ಆದರೆ, ರೈತರ ಅನುಕೂಲಕ್ಕೆ ಕಾಯ್ದೆ ಮಾಡಬೇಕಿದೆ. ಈ ವಿಚಾರದಲ್ಲಿ ಹಸು ಅಥವಾ ಮತ್ತೊಂದು ಎನ್ನುವ ಪ್ರಶ್ನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನೂ ಓದಿ : ನಿನಗೇನು ಮಂಡ್ಯ ಬಗ್ಗೆ ಗೊತ್ತು ಕೂತ್ಕೊಳ್ಳಪ್ಪ : ರಾಜಣ್ಣಗೆ ಹೆಚ್ಡಿಕೆ ಕೌಂಟರ್

ಹಾಲಿನ ದರ ಏರಿಕೆ ಬಗ್ಗೆ ಸುಳಿವು

ಹಾಲು ಉತ್ಪಾದಕರಿಗೆ ಸಹಾಯಧನ ಏರಿಕೆ ಮಾಡುವ ಚಿಂತನೆ ಇದೆ. ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ‌. ದರ ಏರಿಕೆ ಎಂದರೆ ಎರಡು ರೀತಿ ಇದೆ‌. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡುವುದು. ಇನ್ನೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಎರಡು ದರ ಕಡಿಮೆ ಇದೆ ಎನ್ನುವ ಮೂಲಕ ಪರೋಕ್ಷವಾಗಿ ಹಾಲಿನ ದರ ಏರಿಕೆ ಬಗ್ಗೆ ಸುಳಿವು ನೀಡಿದರು.

ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ‌. ಇದಕ್ಕಾಗಿ ಮುಂದಿನ ದಿನಗಳಲ್ಲಿ ಯಾರಿಗೂ ಹೊರೆ ಆಗದಂತೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಇದರ ಜೊತೆಗೆ ಅಮುಲ್ ಜೊತೆ ನಂದಿನ ವಿಲೀನ ಮಾಡುವ ಪ್ರಶ್ನೆ ಇಲ್ಲ. ಅಮೂಲ್ ಪ್ರತ್ಯೇಕವಾದ ಸಂಸ್ಥೆ. ನಂದಿನಿ ಪ್ರತ್ಯೇಕ ಸಂಸ್ಥೆ. ಎರಡನ್ನು ವಿಲೀನ ಮಾಡುವ ಪ್ರಶ್ನೆ ಇಲ್ಲ ಎಂದು ಸಚಿವ ಕೆ.ಎನ್ ರಾಜಣ್ಣ ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES