Sunday, December 22, 2024

ವಿದ್ಯುತ್ ಸ್ಪರ್ಶದಿಂದ ತಂದೆ, ಮಗಳು ದಾರುಣ ಸಾವು

ತುಮಕೂರು : ವಿದ್ಯುತ್ ಸ್ಪರ್ಶದಿಂದ ತಂದೆ ಮತ್ತು ಮಗಳು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದ ರೈತ ದಿಗವಿಂಟಿ ರಾಮಕೃಷ್ಣರೆಡ್ಡಿ (65) ಹಾಗೂ ಪುತ್ರಿ ನಿರ್ಮಲಾ (45) ಮೃತಪಟ್ಟವರು. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೃತ ರಾಮಕೃಷ್ಣಪ್ಪ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ಎಲ್ಲೋಟಿ ಗ್ರಾಮದ ಹೊಲದಲ್ಲಿ ಶುಕ್ರವಾರ ಬೆಳಗ್ಗೆ ನೀರು ಬಿಡಲು ಹೋಗಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಜಮೀನಿಗೆ ಹೋದ ತಂದೆ ಎಷ್ಟು ಹೊತ್ತಾದರೂ ವಾಪಸ್ ಬಂದಿರಲಿಲ್ಲ.

ಇದನ್ನೂ ಓದಿ : ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು

ತಂದೆ ಮನೆಗೆ ಬಾರದ ಕಾರಣ ಗಾಬಾರಿಗೊಂಡ ಮಗಳು ತಂದೆಯನ್ನು ಹುಡುಕಲು ಜಮೀನಿಗೆ ತೆರಳಿದ್ದಳು. ಈ ವೇಳೆ ಮಗಳು ನಿರ್ಮಲಾ ಕೂಡ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮೃತದೇಹಗಳನ್ನು ಬಸವನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ.

ಮೃತ ರಾಮಕೃಷ್ಣಪ್ಪ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಿರಿಯ ಮಗಳು ನಿರ್ಮಲಾ ಈಗ ಮೃತಪಟ್ಟಿದ್ದಾಳೆ. ಕಿರಿಯ ಮಗಳು ಶೀಲಾ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಮತ್ತು ಮಗಳು ಏಕಕಾಲದಲ್ಲಿ ಸಾವನ್ನಪ್ಪಿದ್ದರಿಂದ ಇಡೀ ಗ್ರಾಮವೇ ಮರುಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES