ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಚಂದ್ರೇಗೌಡ ಎಂಬುವರನ್ನು 7 ಬಾರಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಿದರು.
ಮೂಡಾ ಕಮಿಷನರ್ ಆಗಿದ್ದ ನಾಗರಾಜ್ ಎಂಬುವರನ್ನು ತಪ್ಪಿಲ್ಲದಿದ್ದರು ಅಮಾನತು ಮಾಡಿದ್ದರು. ಇಬ್ಬರು ಮಂಡ್ಯದ ಒಕ್ಕಲಿಗ ಸಮುದಾಯದವರು. ಒಕ್ಕಲಿಗ ಅನ್ನೋ ಕಾರಣಕ್ಕೆ ಚಲುವರಾಯಸ್ವಾಮಿ ವಿರುದ್ಧ ನಿಂತಿರೋದು ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ಬಡವರ ಬಾಳಿಕೆ ಕೊಳ್ಳಿ ಇಟ್ಟ ಬಜೆಟ್ : ಪ್ರಲ್ಹಾದ್ ಜೋಶಿ
10 ಬಾರಿ ಸಿಎಂ ಆದ್ರೂ ವೆಲ್ಕಂ
ಅವ್ರಿಗೆ ಒಕ್ಕಲಿಗರಿಗೆ ಹೆಚ್ಚು ಅವಕಾಶ ಸಿಗಬಾರದು ಅನ್ನೋದು ಇದೆ ಅನಿಸುತ್ತದೆ. ನಂಗೆ ಯಾವುದೇ ಬೇಜಾರಿಲ್ಲ. ಇನ್ನು 10 ಬಾರಿ ಸಿಎಂ ಆದರೂ ಸ್ವಾಗತಿಸುತ್ತೇವೆ. ಆ ಕುಟುಂಬಕ್ಕೆ ಯಾವತ್ತೂ, ಯಾವುದೇ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ, ಮಾತಾಡಿಲ್ಲ. ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ. ದೇವರು ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದು ಕುಟುಕಿದರು.
ಪೆನ್ ಡ್ರೈವ್ ನಡೆ ಹೊಸದಲ್ಲ
ಕುಮಾರಸ್ವಾಮಿ ಅವರ ಪೆನ್ ಡ್ರೈವ್ ನಡೆ ಹೊಸದಲ್ಲ. ಎಲ್ಲರೂ ನೋಡಿದ್ದಾರೆ. ಯಾವ ಅಸೆಂಬ್ಲಿಯಲ್ಲಿ, ಯಾರ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ. ಅವರಿಗೆ ಎಲ್ಲರ ಬಗ್ಗೆಯೂ ಗೊತ್ತು ಅಂತಾರೆ. ಮಾತು ಎತ್ತಿದರೆ ಎಲ್ಲರ ರಾಜೀನಾಮೆ ಕೇಳುತ್ತಾರೆ. ಜನಾರ್ಧನ ರೆಡ್ಡಿ 150 ಹಗರಣ ಕೊಟ್ಟಾಗ ಅವರೇ ಸಿಎಂ. ರಾಜೀನಾಮೆ ನೀಡಿ ಹೊರಬಂದು ತನಿಖೆ ಮಾಡಿಸಿಕೊಂಡಿದ್ರಾ? ಎಂದು ಪ್ರಶ್ನೆ ಮಾಡಿದರು.