ಹಾಸನ : ವಿದ್ಯುತ್ ತಂತಿ ತುಳಿದು ವೃದ್ಧೆ ಮತ್ತು ಹಸು ಸಾವು ಪ್ರಕರಣ ಸಂಬಂಧ ಕರ್ತವ್ಯ ಲೋಪ ಹಿನ್ನಲೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅಮಾನತು ಮಾಡಲಾಗಿದೆ.
ಎಇಇ ಚಂದ್ರಮ್ಮ ಅಮಾನತಾದ ಅಧಿಕಾರಿ. ನಿನ್ನೆ (ಶುಕ್ರವಾರ) ಸಂಜೆಯಿಂದ ಸ್ಥಳದಲ್ಲೇ ಮೃತದೇಹ ಇಟ್ಟು ಪ್ರತಿಭಟನೆ ಗ್ರಾಮಸ್ಥರು ನಡೆಸುತ್ತಿದ್ದರು.
ರೈತಸಂಘ ಹಾಗೂ ಗ್ರಾಮಸ್ಥರು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಕೂಡಲೇ ಎಇಇ ಅಮಾನತುಗೊಳಿಸಿ ಎಂದು ಪಟ್ಟು ಹಿಡಿದಿದ್ದರು. ಪ್ರತಿಭಟನಾಕಾರರ ಒತ್ತಾಯ ಪರಿಗಣಿಸಿ ಅಧಿಕಾರಿ ಚಂದ್ರಮ್ಮ ಅವರನ್ನು ಅಮಾನತು ಮಾಡಲಾಗಿದೆ. ಬಳಿಕ, ಮೃತದೇಹ ಮರಣೋತ್ತರ ಪರೀಕ್ಷೆಗೆ ಪ್ರತಿಭಟನಾಕಾರರು ಒಪ್ಪಿದರು.
ಇದನ್ನೂ ಓದಿ : ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು
5 ಲಕ್ಷ ರೂಪಾಯಿ ಪರಿಹಾರ
ಬೇಲೂರು ಶಾಸಕ ಹೆಚ್.ಕೆ ಸುರೇಶ್ ಅವರು ಮೃತರ ಕುಟುಂಬಕ್ಕೆ ಸೆಸ್ಕ್‌ನಿಂದ 5 ಲಕ್ಷ ರೂಪಾಯಿ ಪರಿಹಾರ ವಿತರಿಸಿದರು. ಮಾರ್ಗದಾಳುಗಳಿಗೂ ನೋಟೀಸ್ ನೀಡಲು ಸೆಸ್ಕ್ ಮುಖ್ಯ ಇಂಜಿನಿಯರ್ ಆದೇಶಿಸಿದ್ದಾರೆ.
ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ
ಭಾರಿ ಗಾಳಿ, ಮಳೆಯಿಂದ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ರಂಗಮ್ಮ (60) ಹಾಗೂ ಹಸು ಸಾವನ್ನಪ್ಪಿತ್ತು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಘಟನೆ ನಡೆದಿತ್ತು. ಹಸುನ ಜೊತೆ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿತ್ತು.