ತುಮಕೂರು: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಪ್ರಭಾರ ತಹಶೀಲ್ದಾರ್ ನಾಗಮಣಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆಸ್ಪತ್ರೆಯ ಪ್ರತಿ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ,ಹೊರ ಮತ್ತು ಒಳರೋಗಿಗಳ ಹಿತರಕ್ಷಣೆ ಕಾಪಾಡಬೇಕು.ಎಂದು ಸೂಚಿಸಿದರು. ಈ ವೇಳೆ ಶೌಚಾಲಯದ ಅವ್ಯವಸ್ಥೆ ಕಂಡು ಆಸ್ಪತ್ರೆ ಶೌಚಾಲಯ ದುರಸ್ತಿಗೆ ಕ್ರಮಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಿಬ್ಬಂದಿಗಳ ಕರ್ತವ್ಯವನ್ನು ಸರಿಯಾಗಿ ನಿಭಾಹಿಸಬೇಕು
ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಸಿಗೆಯ ಮೇಲೆ ಹೊದಿಕೆ ಹಾಗೂ ಬೆಡ್‌ಶೀಟ್ ಇರಲ್ಲದೇ ಇರುವುದನ್ನ ಕಂಡು ಬೇಸರ ವ್ಯಕ್ತಪಡಿಸುವ ಜೊತೆಗೆ ವೈದ್ಯರು ಮತ್ತು ದಾದಿಯರು ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು ಬಳಿಕ ಆಸ್ಪತ್ರೆಯ ಸಿಬ್ಬಂದಿ ವರ್ಗದ ಸರಿಯಾದ ಸಮಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ
ಆಸ್ಪತ್ರೆಯ ಹೆರಿಗೆ ಕೋಣೆ, ವಿಶೇಷ ನವಜಾತ ಶಿಶು ಆರೈಕೆ ಕೇಂದ್ರ, ಮಕ್ಕಳ ಪೌಷ್ಟಿಕಾಂಶ ಮತ್ತು ಪುನರ್ವಸತಿ ಕೇಂದ್ರ, ಶಸ್ತ್ರ ಚಿಕಿತ್ಸಾ ಕೋಣೆ, ಒಳ ರೋಗಿಗಳ ಕೋಣೆ, ಪಿಎನ್‌ಸಿ ವಾರ್ಡ್, ಕ್ಷ- ಕಿರಣ ಕೋಣೆ, ರಕ್ತ ಸಂಗ್ರಹಣ ಕೇಂದ್ರ, ಚಿಕಿತ್ಸಾ ವಿಭಾಗ, ಡಯಾಲಿಸಿಸ್, ಒಪಿಡಿ, ವೈದ್ಯರ ತಪಾಸಣೆ ಕೊಠಡಿ, ಔಷಧಿ ವಿತರಣೆ ಕೊಠಡಿ, ರೋಗಿಗಳ ನೋಂದಣಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗದ ಕೊಠಡಿಗಳಿಗೆ ತೆರಳಿ ಪರಿಶೀಲಿಸಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಪರಿಶೀಲನೆ
ಆಸ್ಪತ್ರೆ ಸಮೀಪವೇ ಇರುವ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ಜೊತೆಗೆ ಸ್ಪಚ್ಛತೆಗೆ ಹೆಚ್ಚು ಮಹತ್ವ ನೀಡುವಂತೆ ಸೂಚಿಸಿದರು ಅಲ್ಲದೇ ಅಡುಗೆ ಹೊಗೆ ಹೋಗುವ ಚಿಮಣಿಯನ್ನು ನೋಡಿ ವಾರಕೊಮ್ಮೆಯಾದರೂ ಶುಚಿಗೊಳಿಸು ಹಾಗೂ ಕ್ಯಾಂಟೀನ್ ಸುತ್ತಮುತ್ತ ಶುಚಿತ್ವವಾಗಿ ಇಟ್ಟುಕೊಳ್ಳುವಂತೆ ತಿಳಿಸಿದರಲ್ಲದೇ, ಅಡಿಗೆಗೆ ಬಳಸುವ ವಸ್ತುಗಳ ಗುಣಮಟ್ಟ ಪರಿಶೀಲನೆ ನಡೆಸಿ ಉತ್ತಮವಾದ ಬೇಳೆಯನ್ನು ಬೆಳೆಸುವಂತೆ ಸೂಚನೆ ನೀಡದರಲ್ಲದೇ ಕುಡಿಯುವ ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಸೂಚನೆ ನೀಡಿದ್ದರು.