Wednesday, January 22, 2025

ಶಾರದೆ ನೆಲೆಯಲ್ಲಿ ತಪ್ಪಿದ ಅನಾಹುತ : ಆರನೇ ಅಂತಸ್ತಿನಿಂದ ಧರೆಗುರುಳಿದ ಮೇಲ್ಛಾವಣಿ

ಮಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನದಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯ ಬಿರುಗಾಳಿಗೆ ತಲಪಾಡಿ ಶಾರದಾ ವಿದ್ಯಾಲಯದ ಆರು ಅಂತಸ್ತಿನ ಕಟ್ಟಡದ ಮೇಲೆ ಅಳವಡಿಸಿದ್ದ  ಭಾರೀ ಗಾತ್ರದ ಶೀಟ್​ ಮೇಲ್ಛಾವಣಿ ಕೆಳಗೆ ಬಿಂದಿರುವ ಘಟನೆ ನಡೆದಿದೆ.

ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್ ಒಳಗಿನ ಆರು ಅಂತಸ್ತಿನ ಶಾಲಾ ಕಟ್ಟಡದ ಮೇಲೆ ಇತ್ತೀಚೆಗೆ ಅಳವಡಿಸಲಾಗಿದ್ದ ಭಾರೀ ಗಾತ್ರದ ಶೀಟ್ ಛಾವಣಿ ಉರುಳಿ ಕೆಳಗೆ ಬಿದ್ದಿದೆ. ಶೀಟ್ ಅಳವಡಿಸಲು ಹಾಕಲಾಗಿದ್ದ ಭಾರೀ ಗಾತ್ರದ ಕಬ್ಬಿಣದ ಸಲಾಕೆಗಳು ಮುರಿದು ಕೆಳಗೆ ಬಿದ್ದಿದ್ದು ಅನೇಕ ವಾಹನಗಳು ಚೂರಾಗಿವೆ. ನಿನ್ನೆ ಸುಮಾರು 11: 30ಕ್ಕೆ ಘಟನೆ ಸಂಭವಿಸಿದ್ದು,ಶಾಲೆಗೆ ರಜೆ ಇರುವ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಇಟ್ಟಿಗೆ ಖರೀದಿ ನೆಪದಲ್ಲಿ ಬಂದು ಉದ್ಯಮಿ ಅಪಹರಣ, ಹಣಕ್ಕೆ ಬೇಡಿಕೆ

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

ಶಾಲಾಡಳಿತವು ಕ್ರೇನ್ ಮುಖೇನ ಧರೆಗುರುಳಿರುವ ಶೀಟ್, ಕಬ್ಬಿಣದ ಸಲಾಕೆಗಳನ್ನು ತರಾತುರಿಯಲ್ಲಿ ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ. ಧರ್ಮ, ಸಂಸ್ಕೃತಿಯ ಶಿಕ್ಷಣದ ನೆಪದಲ್ಲಿ ಎಲ್.ಕೆ.ಜಿ ಮಕ್ಕಳಿಂದಲೇ ಲಕ್ಷಗಟ್ಟಲೆ ಶುಲ್ಕ ಪೀಕಿಸುತ್ತಿರುವ ಶಾರದಾ ವಿದ್ಯಾಲಯದ ಇಂತಹ ಬೇಜಬ್ದಾರಿತನಕ್ಕೆ ವಿದ್ಯಾರ್ಥಿಗಳ ಪೋಷಕರೇ ಗರಂ ಆಗಿದ್ದಾರೆ.

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

 

 

RELATED ARTICLES

Related Articles

TRENDING ARTICLES