ಹುಬ್ಬಳ್ಳಿ : ಹೆಂಗಸ್ರು ಮಾತ್ರ ಫ್ರೀ ಬಸ್ ಪ್ರಯಾಣ ಪಡೆಯಬೇಕೇ? ಗಂಡಸ್ರು ಫ್ರೀ ಆಗಿ ಪ್ರಯಾಣ ಮಾಡಬಾರದಾ? ಅಂತ ಇಲ್ಲೊಬ್ಬ ಹೆಣ್ಣಿನ ಅವತಾರ ತಾಳಿ ಸಿಕ್ಕಿಬಿದ್ದಿದ್ದಾನೆ.
ಹೌದು, ಶಕ್ತಿ ಯೋಜನೆಯ ಲಾಭ ಪಡೆಯುವ ಉದ್ದೇಶದಿಂದ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ವೀರಭದ್ರಯ್ಯ ನಿಂಗಯ್ಯ ಮಠಪತಿ ಎಂಬ ವ್ಯಕ್ತಿಯೇ ಬುರ್ಖಾ ಧರಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಭೂಪ. ಈತ ವಿಜಯಪುರ ಜಿಲ್ಲೆಯ ಸಿಂದಗಿಯ ಘೋಡಗೋರಿ ನಿವಾಸಿ. ಅನುಮಾನಗೊಂಡ ಸಾರ್ವಜನಿಕರು ಆತನನ್ನು ಹಿಡಿದು ವಿಚಾರಿಸಿದಾಗ ವಿಷಯ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ : ಫ್ರೀ ಪ್ರಯಾಣ ಜಾರಿಯಾದ್ರೂ ತಪ್ಪದ ‘ಟಾಪ್ ಪ್ರಯಾಣ’
ಈ ವೇಳೆ ವೀರಭದ್ರಯ್ಯ ನಿಂಗಯ್ಯ ಮಠಪತಿ, ತಾನು ಭಿಕ್ಷಾಟನೆಗಾಗಿ ಈ ರೀತಿ ವೇಷ ತೊಟ್ಟಿರುವುದಾಗಿ ಹೇಳಿದ್ದಾನೆ. ಆದರೆ, ಹಲವರು ಉಚಿತ ಬಸ್ ಪ್ರಯಾಣಕ್ಕಾಗಿ ಆತ ಮಹಿಳೆಯರಂತೆ ವೇಷ ಧರಿಸಿದ್ದಾನೆ ಎಂದು ಭಾವಿಸಿದ್ದರು. ವೀರಭದ್ರಯ್ಯ ಬಳಿ ಮಹಿಳೆಯ ಆಧಾರ್ ಕಾರ್ಡ್ ಜೆರಾಕ್ಸ್ ಕೂಡ ಸಿಕ್ಕಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಬಸ್ ನಲ್ಲಿ ಪುರುಷರಿಗೆ, ವಿದ್ಯಾರ್ಥಿಗಳಿಗೆ ಆಸನ ಸಿಗುತ್ತಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಮಧ್ಯೆ ವೀರಭದ್ರಯ್ಯ ಬಸ್ ಪ್ರಯಾಣಕ್ಕಾಗಿ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾನೆ ನೋಡಿ.