Wednesday, January 22, 2025

ಇಟ್ಟಿಗೆ ಖರೀದಿ ನೆಪದಲ್ಲಿ ಬಂದು ಉದ್ಯಮಿ ಅಪಹರಣ, ಹಣಕ್ಕೆ ಬೇಡಿಕೆ

ಕೋಲಾರ : ಇಟ್ಟಿಗೆ ಖರೀದಿ ನೆಪದಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಜಿಲ್ಲೆಯ ಮಾಲೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಆತ್ಮಹತ್ಯೆ ಯತ್ನಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಚಿವ ಚಲುವರಾಯಸ್ವಾಮಿ

ಮಾಲೂರು ಪಟ್ಟಣದ ಮಾರುತಿ ಬಡಾವಣೆಯ ನಿವಾಸಿ ಬಾಬು ಅಪಹರಣಕ್ಕೊಳಪಟ್ಟ ವ್ಯಕ್ತಿ, ಬುಧವಾರ ಸಂಜೆ ಎಡಗಿನಬೆಲೆ ಬಳಿ ಇಟ್ಟಿಗೆ ಖರೀದಿ ನೆಪದಲ್ಲಿ ಬಂದ ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಿಸಿದ್ದಾರೆ. ಬಳಿಕ ಬಾಬು ಮಗನಿಗೆ ಕರೆಮಾಡಿ ಲಕ್ಷಾಂತರ ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.

ರಿಯಲ್ ಎಸ್ಟೇಟ್, ಫರ್ನೀಚರ್ ಅಂಗಡಿ, ಸಿಮೆಂಟ್ ಡೀಲರ್ ಹಾಗೂ ಇಟ್ಟಿಗೆ ಕಾರ್ಖಾನೆ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದ ಬಾಬು, ಕೆಲವರ ಜೊತೆ ವೈಷಮ್ಯ ಹೊಂದಿದ್ದ ಇದೆ ಇದೇ ವಿಚಾರಕ್ಕೆ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಪ್ರಕರಣವು ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಿಡ್ನಾಪ್ ಪ್ರಕರಣ ಭೇದಿಸಲು ಪೊಲೀಸರಿಂದ ಮೂರು ತಂಡಗಳು ರಚನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES