Wednesday, January 22, 2025

KGF ಮೀರಿಸೋ ತಂತ್ರಜ್ಞಾನ, 200 ಕೋಟಿ ಬಜೆಟ್ ; 4K ಐಮ್ಯಾಕ್ಸ್-ಡಾರ್ಕ್ ಸೆಂಟ್ರಿಕ್ ಥೀಮ್​ನ ಫಸ್ಟ್ ಇಂಡಿಯನ್ ಮೂವಿ ‘ಸಲಾರ್’

ಸುನಾಮಿ, ಸುಂಟರಗಾಳಿ ಬರೋಕೂ ಮುನ್ನ ಕಡಲು ತುಂಬಾ ಪ್ರಶಾಂತವಾಗಿರುತ್ತೆ ಅಂತಾರೆ. ಅದ್ರಂತೆ ನಮ್ಮ ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸೈಲೆನ್ಸ್ ಹಿಂದೆ ಬಹುದೊಡ್ಡ ವಯಲೆನ್ಸ್ ಅಡಗಿತ್ತು. ಅದು ಲಾವಾರಸದಂತೆ ಇದೀಗ ಉಕ್ಕಿ ಹರಿಯುತ್ತಿದೆ. ಬಹುನಿರೀಕ್ಷಿತ ಸಲಾರ್ ಚಿತ್ರದ ಹೈ ವೋಲ್ಟೇಜ್ ಟೀಸರ್ ಹೊರಬಂದಿದೆ. ಸಿನಿದುನಿಯಾದ ಹಾಟ್ ಟಾಪಿಕ್ ಆಗಿರೋ ಸಲಾರ್, ಪ್ರಭಾಸ್ ಕರಿಯರ್​ಗೆ ಮರುಜೀವ ನೀಡಲಿದೆ.

ಐದೇ ಗಂಟೆಯಲ್ಲಿ ಒಂದೂವರೆ ಕೋಟಿ ವೀವ್ಸ್ ಪಡೆದು, ರೆಕಾರ್ಡ್​ ದಾಖಲಿಸಿದ ಸಲಾರ್ ವರ್ಲ್ಡ್​ನ ಪರಿಚಯ ಹೀಗಿದೆ.

  • ಬ್ರಾಹ್ಮೀ ಮುಹೂರ್ತ.. ಜುರಾಸಿಕ್ ಪಾರ್ಕ್​​​ನಿಂದ ಸಲಾರ್ ಔಟ್ 
  • ಅಬ್ಬಬ್ಬಾ.. ಸಲಾರ್ ಒಂದಲ್ಲ ಎರಡು ಸಿನಿಮಾ.. ಸೀಜ್ ಫೈರ್..!
  • ರೆಬೆಲ್ ಸ್ಟಾರ್   ಮಾಸ್ ರಂಗು.. ಮಾನ್​ಸ್ಟರ್ ನೀಲ್ ಮೇಕಿಂಗ್ ಗುಂಗು
  • ಟೀನು ಆನಂದ್ ಇಂಟ್ರಡ್ಯೂಸ್ ಮಾಡೋ ಸಲಾರ್ ಅಸಲಿ ಪವರ್

ಇದು ಮುಂಜಾನೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸೋಕೂ ಮೊದಲೇ ಸಿನಿಪ್ರಿಯರನ್ನ ಆವರಿಸಿದ ಸಲಾರ್ ಕಥೆ. ಯೆಸ್.. ಚಿತ್ರಪ್ರೇಮಿಗಳು ಮುಂಜಾನೆ ನಾಲ್ಕು ಗಂಟೆ, ಐದು ಗಂಟೆಗೆ ರಿಲೀಸ್ ಆಗುವಂತಹ ಸೂಪರ್ ಸ್ಟಾರ್​ಗಳ ಸಿನಿಮಾಗಳಿಗಾಗಿ, ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿಸಿ, ಹಬ್ಬದ ರೀತಿ ಸೆಲೆಬ್ರೇಟ್ ಮಾಡಿ, ಸಿನಿಮಾನ ಎಂಜಾಯ್ ಮಾಡೋದು ಕಾಮನ್. ಆದ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸಿನಿಮಾವೊಂದರ ಟೀಸರ್​ಗೆ ಐದು ಗಂಟೆಗೇ ಎದ್ದು ಕೂತು, ಕಾತರದಿಂದ ಕಾಯದಿರುವುದು ಇದೇ ಮೊದಲು.

ಇದನ್ನೂ ಓದಿ: ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಯ್ತು ‘ಸಲಾರ್’ ಮೂವಿ ಟೀಸರ್

ಹೌದು.. ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಕಣ್ತುಂಬಿಕೊಳ್ಳೋಕೆ ಇಡೀ ಸಿನಿ ಸಮುದಾಯ ಕಾಯ್ತಿತ್ತು. ಅದಕ್ಕೆ ಮುಂಜಾನೆ 5ಗಂಟೆ 12 ನಿಮಿಷಕ್ಕೆ ಬ್ರಾಹ್ಮೀ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಅದ್ರಂತೆ ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ಕಾಂಬೋನ ಸಲಾರ್ ಟೀಸರ್ ಹೊಂಬಾಳೆ ಫಿಲಂಸ್ ಯೂಟ್ಯೂಬ್​ನಲ್ಲಿ ಲಾಂಚ್ ಆಗಿದೆ. ಕೆಜಿಎಫ್, ಕಾಂತಾರ ಬಳಿಕ ಇದು ಕನ್ನಡ ಚಿತ್ರರಂಗದ ಮತ್ತೊಂದು ಬಿಗ್ಗೆಸ್ಟ್ ವೆಂಚರ್ ಆಗಿದ್ದು, ಸಣ್ಣ ಟೀಸರ್​ನಿಂದ ಟಾಕ್ ಆಫ್ ದಿ ವರ್ಲ್ಡ್​ ಆಗಿದೆ.

ಸಲಾರ್ ನಾಯಕನಟ ಪ್ರಭಾಸ್ ಇಂಟ್ರಡಕ್ಷನ್ ಸಖತ್ ಇಂಟರೆಸ್ಟಿಂಗ್ ಆಗಿದೆ. ಒಂದು ವಿಂಟೇಜ್ ಕಾರ್ ಮೇಲೆ ಕೂತಿರೋ ವಯಸ್ಸಾದ ಅಜ್ಜ. ಆತನ ಸುತ್ತ ಗನ್​ಗಳಿಂದ ಸುತ್ತುವರಿದಿರೋ ಗ್ಯಾಂಗ್​ಸ್ಟರ್ಸ್​. ಏಯ್.. ಅಂತ ಕೈ ಮೇಲೇರಿಸೋ ಆ ಅಜ್ಜ, ಸಿಂಪಲ್ ಇಂಗ್ಲಿಷ್​​​ನಲ್ಲಿ, ನೋ ಕನ್ಫ್ಯೂಷನ್ ಅಂತ ಟೆರಿಫಿಕ್ ಡೈಲಾಗ್ ಹೊಡೀತಾರೆ. ‘ಲಯನ್, ಚೀತಾ, ಟೈಗರ್, ಎಲಿಫೆಂಟ್.. ವೆರಿ ಡೇಂಜರಸ್. ಬಟ್, ನಾಟ್ ಇನ್ ಜುರಾಸಿಕ್ ಪಾರ್ಕ್​. ಬಿಕಾಸ್ ಇನ್ ದಟ್ ಪಾರ್ಕ್’.. ಅನ್ನೋ ಡೈಲಾಗ್​ನೊಂದಿಗೆ​ ರೆಬೆಲ್ ಸ್ಟಾರ್ ಪ್ರಭಾಸ್ ಇಂಟ್ರಡ್ಯೂಸ್ ಆಗ್ತಾರೆ.

ಯಂಗ್ ರೆಬೆಲ್ ಸ್ಟಾರ್ ಆಗಿದ್ದ ಪ್ರಭಾಸ್, ಈ ಚಿತ್ರದಿಂದ ರೆಬೆಲ್ ಸ್ಟಾರ್ ಆಗಿ ಬಡ್ತಿ ಪಡೆದಿದ್ದಾರೆ. ನಾಯಕನಟನನ್ನ ಇಂಟ್ರಡ್ಯೂಸ್ ಮಾಡೋ ಪಾತ್ರದಲ್ಲಿ ಪುಷ್ಪಕ ವಿಮಾನ, ಅಂಜಿ ಚಿತ್ರದ ಖ್ಯಾತಿಯ ನಟ ಟೀನು ಆನಂದ್ ಕಾಣಸಿಗಲಿದ್ದಾರೆ. ಹೀರೋಯಿನ್ ಶ್ರುತಿ ಹಾಸನ್, ದೇವರಾಜ್, ಜಗಪತಿ ಬಾಬು, ಮಧು ಗುರುಸ್ವಾಮಿ ಪಾತ್ರಗಳು ರಿವೀಲ್ ಆಗದಿದ್ರೂ ಸಹ, ಟೀಸರ್​ನ ಎಂಡ್​ನಲ್ಲಿ ಕಾಣುವ ಪೃಥ್ವಿರಾಜ್ ಸುಕುಮಾರನ್ ಲುಕ್ ಕಿಕ್ ಕೊಡ್ತಿದೆ. ಈ ಚಿತ್ರದ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್, ಸಲಾರ್​ನ ಖಳನಾಯಕರಾಗಿದ್ದಾರೆ.

  • ಕೆಜಿಎಫ್​ನ ಮೀರಿಸೋ ತಂತ್ರಜ್ಞಾನ.. 200 ಕೋಟಿ ಬಜೆಟ್..!
  • 4K ಐಮ್ಯಾಕ್ಸ್.. ಡಾರ್ಕ್​ ಸೆಂಟ್ರಿಕ್ ಥೀಮ್​ನ ಮೊದಲ ಮೂವಿ
  • KGF, ಕಾಂತಾರ ಬಳಿಕ ಹೊಂಬಾಳೆ ಫಿಲಂಸ್​ ಬಿಗ್ ವೆಂಚರ್

ಪ್ರಭಾಸ್ ಮಾಸ್ ಖದರ್ ಜೊತೆ ಪ್ರಶಾಂತ್ ನೀಲ್ ಮೇಕಿಂಗ್ ಖದರ್ ಟೀಸರ್​ನ ಹೈಲೈಟ್ ಆಗಿದೆ. ನೋಡೋಕೆ ಕತ್ಲು ಕತ್ಲು ಅನಿಸಿದ್ರೂ, ಇದು ಕೆಜಿಎಫ್ ಪಾರ್ಟ್​-3 ತರಹ ಇದೆ ಅನ್ನೋ ಫೀಲ್ ಕೊಟ್ರೂ ಸಹ, ಮ್ಯಾಟರ್ ಬೇರೇನೇ ಇದೆ. ಕೆಜಿಎಫ್​ನ ಸಿನಿಮ್ಯಾಟಿಕ್ ವರ್ಷನ್ 3.2K. ಆದ್ರೆ ಸಲಾರ್​ 4K ಐಮ್ಯಾಕ್ಸ್ ವರ್ಷನ್​​ನಲ್ಲಿ ತಯಾರಾಗಿದೆ. ಅಲ್ಲದೆ DCT ಟೆಕ್ನಾಲಜಿ ಅಂದ್ರೆ ಡಾರ್ಕ್​ ಸೆಂಟ್ರಿಕ್ ಥೀಮ್​ನಲ್ಲಿ ಚಿತ್ರಿಸಲಾಗಿದೆ. ಇದು ಈ ತಂತ್ರಜ್ಞಾನದಲ್ಲಿ ತಯಾರಾದ ಇಂಡಿಯಾದ ಮೊಟ್ಟ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕೆಜಿಎಫ್, ಕಾಂತಾರ ಬಳಿಕ ನಮ್ಮ ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ನಿರ್ಮಾಣದ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ವೆಂಚರ್. ಸುಮಾರು 200 ಕೋಟಿ ಬಿಗ್ ಬಜೆಟ್​​ನಲ್ಲಿ ಇದನ್ನ ನಿರ್ಮಾಣ ಮಾಡ್ತಿದ್ದು, ಕೆಜಿಎಫ್​ನ ಮೀರಿಸೋ ರೇಂಜ್​ಗೆ ಮೇಕಿಂಗ್​ ಫೀಲ್ ಕೊಡ್ತಿದೆ. ಕೆಜಿಎಫ್ ರೀತಿ ಇದು ಕೂಡ ಒಂದಲ್ಲ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಟೀಸರ್​ನಲ್ಲಿ ಇದು ‘ಪಾರ್ಟ್​ 1- ಸೀಜ್ ಫೈರ್’ ಅನ್ನೋದನ್ನ ಚಿತ್ರತಂಡವೇ ಅಧಿಕೃತವಾಗಿ ಅನೌನ್ಸ್ ಮಾಡಿದೆ.

ಅಲ್ಲಿಗೆ ಬಹುದೊಡ್ಡ ಕಥೆ. ಹತ್ತಾರು ಬಿಗ್ ಸ್ಟಾರ್ಸ್​ ಸಮಾಗಮದ ಸಿನಿಮಾ ಅನ್ನೋದು ಕಾತರಿ ಆಗಿದೆ. ಬಾಹುಬಲಿ ಬಳಿಕ ಪ್ರಭಾಸ್​ಗೂ ಇದು ಎರಡು ಭಾಗಗಳಲ್ಲಿ ಬರ್ತಿರೋ ಸಿನಿಮಾ. ಹೀರೋ ಮತ್ತು ನಿರ್ದೇಶಕರಿಬ್ಬರಿಗೂ ಈ ಎರಡು ಭಾಗಗಳ ಸಿನಿಮಾಗಳನ್ನ ಮಾಡೋದ್ರಲ್ಲಿ ಅನುಭವವಿದೆ. ಇನ್ನು ಕೆಜಿಎಫ್​ನ ತಂತ್ರಜ್ಞರೇ ಕೂಡಿ ಮಾಡಿರೋ ಸಿನಿಮಾ ಇದು. ರವಿ ಬಸ್ರೂರು ಸಂಗೀತ, ಶಿವಕುಮಾರ್ ಆರ್ಟ್​ ವರ್ಕ್​, ಭುವನ್ ಗೌಡ ಸಿನಿಮಾಟೋಗ್ರಾಫಿ ಸಲಾರ್​ಗಿದೆ.

  • ಹ್ಯಾಟ್ರಿಕ್ ಸೋಲಿಂದ ಕಂಗೆಟ್ಟ ಪ್ರಭಾಸ್ ಕರಿಯರ್​ಗೆ ಮರುಜೀವ..!
  • ಐದೇ ಗಂಟೆಯಲ್ಲಿ ಒಂದೂವರೆ ಕೋಟಿ ವೀವ್ಸ್.. ನ್ಯೂ ರೆಕಾರ್ಡ್​..!

ಯೆಸ್.. ಸಲಾರ್ ಟೀಸರ್ ಭಾರತೀಯ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಣ್ಮುಚ್ಚಿ ಕಣ್ ತೆಗೆಯೋ ಒಳಗೆ, ಮಿಲಿಯನ್ ಗಟ್ಟಲೆ ವೀವ್ಸ್ ಪಡೆದು ಬಾಲಿವುಡ್, ಹಾಲಿವುಡ್ ಮಂದಿಯ ನಿದ್ದೆಗೆಡಿಸಿದೆ. ರಿಲೀಸ್ ಆದ ಜಸ್ಟ್ ಐದು ಗಂಟೆಯಲ್ಲಿ 15 ಮಿಲಿಯನ್, ಅಂದ್ರೆ ಒಂದೂವರೆ ಕೋಟಿ ವೀವ್ಸ್​ನಿಂದ ಟ್ರೆಂಡಿಂಗ್ ನಂ.1ನಲ್ಲಿದೆ. ಕಥೆಯಲ್ಲಿ ಧಮ್, ಪಾತ್ರಗಳಲ್ಲಿ ರಿಧಮ್, ಮೇಕಿಂಗ್ ಮೈಂಡ್ ಬ್ಲೋಯಿಂಗ್ ಅನಿಸಿದ್ರೆ ಮಾತ್ರ ಈ ರೀತಿಯ ದಾಖಲೆಗಳು ಬರೆಯಲ್ಪಡುತ್ತವೆ.

ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ವಿಶ್ವದಾದ್ಯಂತ ಏಕಕಾಲದಲ್ಲಿ ಕನ್ನಡ, ತೆಲುಗು ಜೊತೆ ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಗೆ ಬರಲಿದೆ. ಇಂಡಿಯನ್ ಸಿನಿಮಾನ ಕಲ್ಟಿವೇಟ್ ಮಾಡ್ತಿರೋ ಹೊಂಬಾಳೆ ಫಿಲಂಸ್, ಚಿತ್ರರಂಗದ ಪಾಲಿಗೆ ಕಲ್ಟಿವೇಟರ್ ಅನಿಸಿಕೊಂಡಿದೆ. ಟೀಸರ್ ಗತ್ತು, ಗಮ್ಮತ್ತು ನೋಡ್ತಿದ್ರೆ, ಕನಿಷ್ಟ ಸಾವಿರ ಕೋಟಿ ಬಾಕ್ಸ್ ಆಫೀಸ್​ಗೆ ಯಾವುದೇ ಮೋಸವಿಲ್ಲ ಅಂತಿದ್ದಾರೆ ಸಿನಿಪಂಡಿತರು.

ರಾಜಮೌಳಿಯ ಬಾಹುಬಲಿ ಸಿನಿಮಾದ ಬಳಿಕ ಡಾರ್ಲಿಂಗ್ ಪ್ರಭಾಸ್​ ಸಕ್ಸಸ್ ಗ್ರಾಫ್ ಕುಗ್ಗುತ್ತಲೇ ಇತ್ತು. ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್.. ಹೀಗೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಹಾಗೂ ಅವ್ರ ಡೈಹಾರ್ಡ್​ ಫ್ಯಾನ್ಸ್​ಗೆ ಸಲಾರ್ ಹೊಸ ಭರವಸೆ ನೀಡಿದೆ. ಮರುಭೂಮಿಯಲ್ಲಿನ ಓಯಾಸಿಸ್​ನಂತೆ ರೆಬೆಲ್ ಸ್ಟಾರ್ ಕರಿಯರ್​ಗೆ ಮರುಜೀವ ನೀಡಿದೆ.

ಭಯಾನಕವಾದ ಕ್ರೌರ್ಯಭರಿತ ಯುದ್ದಕ್ಕೆ ಸಜ್ಜಾಗಿ ಅನ್ನೋ ಸೂಚನೆ ನೀಡಿರೋ ನೀಲ್, ಸೌತ್​​ ಇಂಡಸ್ಟ್ರಿಯಿಂದ ವರ್ಲ್ಡ್​ ಸಿನಿದುನಿಯಾಗೆ ಮತ್ತೊಂದು ಮೈಲಿಗಲ್ಲು ಸೃಷ್ಟಿಸೋ ಸಿನಿಮಾ ನೀಡಲಿದ್ದಾರೆ. ಟೀಸರ್​ಗೆ ಇಡೀ ಇಂಡಸ್ಟ್ರಿ ದಂಗಾಗಿದ್ದು, ಬಾಕ್ಸ್ ಆಫೀಸ್ ಹೈಜಾಕ್ ಮಾಡೋದು ಕನ್ಫರ್ಮ್​.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES