ಬೆಂಗಳೂರು : ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಯತ್ನ ಪ್ರಕರಣದ ಚರ್ಚೆಯ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಮೇಲೆಯೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶಗೊಂಡರು.
ವಿಧಾನಸಭೆ ಮಾತನಾಡಿದ ಕುಮಾರಸ್ವಾಮಿ, ಅವನು ಬದುಕಲಿ ಅಂತ ನಾವು ಹೇಳಿ ಬಂದಿರೋದು. ಸಾಯಿಲಿ ಅಂತ ಹೇಳಿ ಬಂದಿಲ್ಲ. ನಿನಗೇನು ಮಂಡ್ಯ ಬಗ್ಗೆ ಗೊತ್ತು ಕೂತ್ಕೊಳ್ಳಪ್ಪ ಎಂದರು.
ಇಂಧನ ಇಲಾಖೆಯಲ್ಲಿ ವರ್ಗಾವಣೆಗೆ ಹತ್ತು ಕೋಟಿ ಬೇಡಿಕೆ ವಿಚಾರವಾಗಿ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು, ಹತ್ತು ಕೋಟಿ ಬೇಡಿಕೆ ಬಗ್ಗೆ ಪೆನ್ ಡ್ರೈವ್ ಸಾಕ್ಷಿ ಕೊಡಿ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದರು.
ಇದನ್ನೂ ಓದಿ : ಸದನದಲ್ಲಿ 2,400 ಕೋಟಿ ಬಾಂಬ್ ಸಿಡಿಸಿದ ಯತ್ನಾಳ್
ಗಣಪತಿ, ರವಿ ವಿಚಾರ ಕೆದಕಿದ ದಳಪತಿ
ಕೆ.ಜೆ ಜಾರ್ಜ್ ಅವರಿಗೂ ತಿರುಗೇಟು ಕೊಟ್ಟ ಕುಮಾರಸ್ವಾಮಿ, ಭಾಷಣ ಮಾಡಿ ತೇಜೋವಧೆ ಮಾಡಬೇಡಿ. ಗಣಪತಿ ವಿಚಾರದಲ್ಲಿ ಅದೇ ರೀತಿ ಮಾತನಾಡಿದ್ದೀರಿ. ಡಿ.ಕೆ ರವಿ ವಿಚಾರವಾಗಿಯೂ ಆರೋಪ ಮಾಡಿದ್ದೀರಿ. ಆದರೆ, ತನಿಖೆ ಆದ ಬಳಿಕ ಒಂದೇ ಮಾತು ಹೇಳಲಿಲ್ಲ ಎಂದು ಕೌಂಟರ್ ಕೊಟ್ಟರು.
ಸಚಿವರ ಹೆಸರನ್ನು ನಾನು ಇನ್ನೂ ಬಾಯಿ ಬಿಟ್ಟಿಲ್ಲ. ಪೆನ್ ಡ್ರೈವ್ ಬಿಡುವ ಧಮ್ಮು-ತಾಕತ್ತು ನನಗೆ ಇದೆ. ಅದರಲ್ಲಿ ಇದ್ದವರ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಇದ್ಯಾ ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದರು.