Monday, December 23, 2024

ಆತ್ಮಹತ್ಯೆ ಯತ್ನಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಚಿವ ಚಲುವರಾಯಸ್ವಾಮಿ

ಮಂಡ್ಯ: ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು ಕೆಲವರು ಅನವಶ್ಯಕವಾಗಿ ರಾಜಕೀಯ ಪ್ರೇರಿತರಾಗಿ ನಡೆದುಕೊಳ್ಳುತ್ತಿದ್ದಾರೆ, ಚಾಲಕನ ಆತ್ಮಹತ್ಯೆ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇದನ್ನೂ ಓದಿ: ರಾಜಕೀಯ ವೈಷಮ್ಯದಿಂದ ವರ್ಗಾವಣೆ ಮಾಡಿಸಿದ ಆರೋಪ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ಜಿಲ್ಲೆಯ ನಾಗಮಂಗಲ ಡಿಪೋದ ಕೆಎಸ್​ಆರ್​ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ವರ್ಗಾವಣೆ ಸಹಜ ಪ್ರಕ್ರಿಯೆ, ಎಲ್ಲರ ಕಾಲದಲ್ಲೂ ವರ್ಗಾವಣೆ ನಡೆದಿದೆ.

ನಾನು ಆ ಚಾಲಕನ ವರ್ಗಾವಣೆಗೆ ಯಾವುದೇ ಪತ್ರ ನೀಡಿಲ್ಲ, ವರ್ಗಾವಣೆ ಮಾಡಿ ಅಂತ ಹೇಳಿಲ್ಲ, ಆದರೆ ವರ್ಗಾವಣೆ ಆಗಿದೆ. ಆ ಚಾಲಕನ ಸಂಬಂಧಿಕರು ನನಗೆ ವಿಚಾರ ತಿಳಿಸಿದರು ಕೂಡಲೇ ನಾನೇ ಅದನ್ನು ತಡೆಹಿಡಿಯುವಂತೆ ಸೂಚನೆ ನೀಡಿದ್ದೇನೆ, ತನಿಖೆ ನಡೆಸಿ ಏನಾದರೂ ತಪ್ಪಿದ್ದರೇ ಆಮೇಲೆ ವರ್ಗಾವಣೆ ಮಾಡಿ ಅಂತ ಹೇಳಿದ್ದೆ ಎಂದರು.

ವರ್ಗಾವಣೆ ರದ್ದುಮಾಡಿವಂತೆ ಆಗ್ರಹಿಸಿ ಇವರು ನಿನ್ನೆ ಈ ರೀತಿ ಮಾಡಿಕೊಂಡಿದ್ದಾರೆ, ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ, ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಾಂತ ಜೆಡಿಎಸ್ ನವರೆಲ್ಲರನ್ನೂ ವರ್ಗಾವಣೆ ಮಾಡೋಕಾಗುತ್ತಾ ಎಂದರು.

RELATED ARTICLES

Related Articles

TRENDING ARTICLES