Friday, November 22, 2024

ಕಾಡಾನೆ ಜೊತೆ ಸೆಲ್ಫಿಗೆ ಪೋಸ್ : 20 ಸಾವಿರ ದಂಡ ಕಕ್ಕಿಸಿದ ಅರಣ್ಯ ಇಲಾಖೆ

ಚಾಮರಾಜನಗರ : ಕಾಡಾನೆ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಂದ ತಲಾ 10 ಸಾವಿರ ದಂಡ ಕಕ್ಕಿಸಿರುವ ಘಟನೆ ಚಾಮರಾಜನಗರ ಗಡಿಭಾಗವಾದ ಅಸನೂರು ಬಳಿ ನಡೆದಿದೆ.

ತೆಲಂಗಾಣ ನಿಜಾಂಪೇಟೆ ಮೂಲದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ದಂಡ ಕಟ್ಟಿರುವ ಪ್ರವಾಸಿಗರು.

ಬುಧವಾರ ಸಂಜೆ ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಇವರು ಕೊಯಮತ್ತೂರಿಗೆ ತೆರಳುವಾಗ ಆಸನೂರು ಬಳಿ ಆನೆ ನಿಂತಿದ್ದನ್ನು ಕಂಡಿದ್ದಾರೆ.

ಇದನ್ನೂ ಓದಿ : ವರುಣಾರ್ಭಟಕ್ಕೆ ಕಾಫಿನಾಡು ತತ್ತರ, ಧರೆಗುರುಳಿದ 70ಕ್ಕೂ ಹೆಚ್ಚು ಅಡಿಕೆ ಮರ

ಪರಾರಿಯಾಗಿದ್ದ ಪ್ರವಾಸಿಗರು

ಕಾರಿನಿಂದ ಇಳಿದ ಈ ಇಬ್ಬರು ವ್ಯಕ್ತಿಗಳು ಕಾಡಾನೆಯ ತೀರಾ  ಸಮೀಪ ಹೋಗಿ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದನ್ನು ಗಸ್ತು ತಿರುಗುತ್ತಿದ್ದ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಕಾರು ಹತ್ತಿ ಪರಾರಿ ಆಗಿದ್ದರು.

ತಲಾ 10 ಸಾವಿರ ದಂಡ

ಬಳಿಕ, ಬಣ್ಣಾರಿ ಚೆಕ್ ಪೋಸ್ಟ್ ಗೆ ಇವರ ಮಾಹಿತಿ ತಿಳಿಸಿ ಅಲ್ಲಿ ಕಾರನ್ನು ಅಡ್ಡ ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವಬ್ದಾರಿ ತೋರಿದ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

RELATED ARTICLES

Related Articles

TRENDING ARTICLES