Sunday, January 5, 2025

ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ‘ಸಲಾರ್’ ಟೀಸರ್ ರಿಲೀಸ್​ನ ‘Disappointed’ ಹ್ಯಾಶ್​ಟ್ಯಾಗ್

ಬೆಂಗಳೂರು : ಬರೋಬ್ಬರಿ 3 ವರ್ಷಗಳ ಬಳಿಕ ಸಲಾರ್​ ಸಿನಿಮಾ ಟೀಸರ್ ಇಂದು ಮುಂಜಾನೆ 5.12ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ರಿಲೀಸ್​ ಆದ ಕೆಲವು ಗಂಟೆಗಳಲ್ಲಿ ಸಿನಿ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ​

ಹೌದು, ಸಲಾರ್ ಸಿನಿಮಾ (Salaar Movie) ಘೋಷಣೆ ಆಗಿದ್ದು 2020ರ ಡಿಸೆಂಬರ್​ನಲ್ಲಿ. ಈ ಚಿತ್ರದ ಮುಹೂರ್ತದಲ್ಲಿ ಪ್ರಭಾಸ್, ಯಶ್ ಮೊದಲಾದವರು ಭಾಗಿ ಆಗಿದ್ದರು. ಆದರೆ ಇದನ್ನೂ ರಿಲೀಸ್​ ಮಾಡಲು 3 ವರ್ಷಗಳ ಕಾಲ ಬೇಕಾಗಿತ್ತು. ಬಿಡುಗಡೆಯ ನಂತರವೇ Disappointed ಎಂದು ವೀಕ್ಷಕರು ವಿಮಾರ್ಶೆ ಮಾಡಿದ್ಧಾರೆ

ಇದನ್ನೂ ಓದಿ : ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಯ್ತು ‘ಸಲಾರ್’ ಮೂವಿ ಟೀಸರ್

ಪ್ರಭಾಸ್  ನಟನೆ ಸಲಾರ್​ ಈ ಟೀಸರ್​ (Salaar Teaser) ಬಿಡುಗಡೆಯಾದ ಬಳಿಕ ಟ್ವಿಟರ್​ನಲ್ಲಿ Disappointed ಹ್ಯಾಶ್​ಟ್ಯಾಗ್ ಟ್ರೆಂಡ್ ಆಯ್ತು. ಟ್ವಿಟರ್​ ಸಲಾರ್​ ಚಿತ್ರದ ಪೋಸ್ಟ್​ ಹಾಕಿ  ವಿಮರ್ಶೆ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಗ್ಗೆ  ಸಾಕಷ್ಟು ಚರ್ಚೆ ಆಗುತ್ತಿದೆ.

ಸಲಾರ್​ ಟೀಸರ್​ ನೋಡಿ ಪ್ರೇಕ್ಷರಿಗೆ ಬೇಸರ 

ಕೆಲ ಸಿನಿಪ್ರೇಕ್ಷಕರು ಅಂದುಕೊಂಡ ರೀತಿಯಲ್ಲಿ ಮೂಡಿಬಂದಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ.ಎಂದು ಟ್ವಿಟರ್​ನಲ್ಲಿ Disappointed ಹ್ಯಾಶ್​ಟ್ಯಾಗ್ ಹಾಕಿ ಸಲಾರ್​ ಚಿತ್ರದ ವಿಮರ್ಶೆ ಮಾಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ರಿಲೀಸ್​ ಆದ 2 ಗಂಟೆಗೆ 1 ಮಿಲಿಯನ್ ವೀಕ್ಷಣೆ 

‘ಕೆಜಿಎಫ್ 2’ ಚಿತ್ರದ ಟೀಸರ್ ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿತ್ತು. ಆದರೆ, ಮುಂಜಾನೇ ‘ಸಲಾರ್’ ಟೀಸರ್ ರಿಲೀಸ್ ಎರಡು ಗಂಟೆಗೆ ಕೇವಲ 1 ಮಿಲಿಯನ್ ವೀಕ್ಷಣೆ ಕಂಡಿದೆ. ಟೀಸರ್​ನಲ್ಲಿ ಯಾವುದೇ ವಿಷಯ ಇಲ್ಲ ಅನ್ನೋದು  ಅಭಿಮಾನಿಗಳ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಬಹಳ ನಿರೀಕ್ಷೆ 

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಖ್ಯಾತಿ ಹೆಚ್ಚಾಗಿದೆ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾ ‘ಸಲಾರ್’ ಬಗ್ಗೆ ನಿರೀಕ್ಷೆ ಹೆಚ್ಚಿತ್ತು.

ಇನ್ನೂ ಸೆಪ್ಟೆಂಬರ್ 28ಕ್ಕೆ ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ  ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದೆ. ತಾರಾಗಣದಲ್ಲಿ ಶ್ರುತಿ ಹಾಸನ್ ಅವರು ಈ ಚಿತ್ರಕ್ಕೆ ನಾಯಕಿ. ಪೃಥ್ವಿರಾಜ್ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ಭುವನ್ ಗೌಡ ಛಾಯಾಗ್ರಹಣವಿದೆ.

 

 

RELATED ARTICLES

Related Articles

TRENDING ARTICLES