Monday, December 23, 2024

ಜಮೀನಿಗಾಗಿ ಸಹೋದರರ ಗಲಾಟೆ : ಎರಡು ಗುಂಪುಗಳ ನಡುವೆ ಮಾರಾಮಾರಿ

ಚಿತ್ರದುರ್ಗ: ಜಮೀನು ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿಯಾಗಿದ್ದು, ಪೊಲೀಸರ ಎದುರಲ್ಲಿಯೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

ಹೌದು,  ಈ ಘಟನೆ ಚಿತ್ರದುರ್ಗ ಜಿಲ್ಲೆಯ ಗಂಗಸಮುದ್ರ ಗ್ರಾಮದ ಬಳಿ ನಡೆದಿದೆ. ಒಂದೇ ಕುಟುಂಬದಲ್ಲಿ ಹುಟ್ಟಿ ಸೋದರ ಗಂಗಾಧರಪ್ಪ ಹಾಗೂ ಅಣ್ಣಪ್ಪ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿತ್ತು.

ಇದನ್ನು ಓದಿ:ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಹೆಚ್‌.ಡಿ ಕುಮಾರಸ್ವಾಮಿ ಆಗ್ರಹ 

ಹೊಳಲ್ಕೆರೆ ತಾಲೂಕಿನ ಗಂಗಸಮುದ್ರ ಬಳಿ ನಡೆದ ಮಾರಾಮಾರಿ ಗಲಾಟೆ ವಿಡಿಯೋ ವೈರಲ್ ಅಗಿದೆ. ಅಷ್ಟೇ ಅಲ್ಲದೆ, ಆ ಗಲಾಟೆಯಲ್ಲಿ ಕೈಲಿ ಕುಡುಗೋಲು ಹಿಡಿದು ಹಲ್ಲೆ ಮಾಡಲು ಮುಂದಾದ ಗಂಗಾಧರಪ್ಪ, ಅಲ್ಲಿ ನಿಂತಿರುವ ಜನ ಜಗಳವನ್ನು ಬಿಡಸದೆ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿದ್ದರು. ಗಲಾಟೆ ವೇಳೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ.

ಗಾಯವಾದ ಇಬ್ಬರು ವ್ಯಕ್ತಿಯನ್ನು  ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ನೆಡೆದ ಕಾರಣ ಪೋಲಿಸ್ ಠಾಣೆಗೆ ದೂರು ನೀಡಲಾದ ತಕ್ಷಣವೇ ಪೋಲಿಸರು ಸ್ಥಳಕ್ಕೆ ಧಾವಿಸಿದರು, ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

RELATED ARTICLES

Related Articles

TRENDING ARTICLES