ಬೆಂಗಳೂರು : ಸಚಿವ ಎಂ.ಬಿ ಪಾಟೀಲ್ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 2,400 ಕೋಟಿ ಬಾಂಬ್ ಸಿಡಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಯತ್ನಾಳ್, ಎಂ.ಬಿ ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದರು. ಯತ್ನಾಳ್ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಮೀನು ಕಬಳಿಸುವ ಕೆಲಸ ಮಾಡಿದ್ದಾಗಿ ಯತ್ನಾಳ್ ಆರೋಪ ಮಾಡಿದರು. ಈ ಬಗ್ಗೆ ತನಿಖೆ ಆಗಲೇಬೇಕು ಅಂತ ಪಟ್ಟು ಹಿಡಿದರು. ಶಾಸಕ ಯತ್ನಾಳ್ ಮೇಲೆ ಕಾಂಗ್ರೆಸ್ ಶಾಸಕರು ಮುಗಿಬಿದ್ದರು. ಈ ವೇಳೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಸಿಬಿಐ ತನಿಖೆಗೆ ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ : ನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್
ನನ್ನ ಬಳಿ ವೀಡಿಯೋ ಇದೆ
ಬಸ್ ಕಂಡಕ್ಟರ್ ಚರ್ಚೆ ವೇಳೆ ಸಚಿವ ಕೆ.ಜೆ ಜಾರ್ಜ್ ಬೆಂಬಲಿಸಿ ಸಚಿವ ಎಂ.ಬಿ. ಪಾಟೀಲ್ ಮಧ್ಯಪ್ರವೇಶ ಮಾಡಿದರು. ನೀವು ಸುಮ್ಮನೆ ಆರೋಪ ಮಾಡುತ್ತೀರಿ, ಅಂದು ನೀವು ಯಡಿಯೂರಪ್ಪ ಮೇಲೆ ಸಿಎಂ ಸ್ಥಾನಕ್ಕೆ ೨೪೦೦ ಕೋಟಿ ಆರೋಪ ಮಾಡಿದ್ದೀರಿ. ನನ್ನ ಬಳಿ ವೀಡಿಯೋ ಇದೆ ಎಂದರು.
ಸಿಟ್ಟಿಗೆದ್ದ ಶಾಸಕ ಯತ್ನಾಳ್, ವೀಡಿಯೋ ಬಿಡುಗಡೆ ಮಾಡಿ ಎಂದರು. ಯತ್ನಾಳ್ ಕೋಪ ತಾಪ ನೋಡಿ ಕೂಡಲೇ ಶಾಸಕರಾದ ಡಾ.ಸಿ.ಎನ್ ಅಶ್ವತ್ಥನಾರಾಯಣ ಹಾಗೂ ಸಿ.ಸಿ ಪಾಟೀಲ್ ಯತ್ನಾಳ್ ಬಳಿ ಎದ್ದು ಓಡಿದರು. ಯತ್ನಾಳ್ ಸಮಾಧಾನ ಮಾಡಲು ಪ್ರಯತ್ನಿಸಿದರು. ಅಷ್ಟಾದರೂ ಯತ್ನಾಳ್ ಕೋಪ ತಣಿಯಲಿಲ್ಲ.