Wednesday, January 22, 2025

ರಾಜಕೀಯ ವೈಷಮ್ಯದಿಂದ ವರ್ಗಾವಣೆ ಮಾಡಿಸಿದ ಆರೋಪ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ಮಂಡ್ಯ : ಬಸ್​ ಚಾಲಕನೋರ್ವ ವಿಷಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ಕೆಎಸ್​ಆರ್​​ಟಿಸಿ ಡಿಪೋದಲ್ಲಿ ಬುಧವಾರ ನಡೆದಿದೆ.

ಇದನ್ನೂ ಓದಿ: ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಇಂದಿನಿಂದ ಆರಂಭ : ಸಚಿವ ಶಿವಾನಂದ ಪಾಟೀಲ್ 

ಅಂದೇನಹಳ್ಳಿ ಗ್ರಾಮದ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ, ಇಂದು ಬೆಳಗ್ಗೆ ಮಂಡ್ಯದ ಕೆಎಸ್​ಆರ್​ಟಿಸಿ ಡಿಪೋ ಮುಂದೆ ಅಂದೇನಹಳ್ಳಿ ಗ್ರಾಮಸ್ಥರು ಜಮಾಯಿಸಿ ಡಿಪೋದಿಂದ ಯಾವುದೇ ಬಸ್​ ಗಳು ಹೊರಹೋಗದಂತೆ ತಡೆದು ಗೇಟ್​ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.

ಚಾಲಕ ಜಗದೀಶ್ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್​ಗೆ ಬೆಂಬಲ ನೀಡಿದ್ದ ಎಂಬ ಕಾರಣಕ್ಕೆ ಸಚಿವ ಚಲುವರಾಯಸ್ವಾಮಿ ವರ್ಗಾವಣೆ ಮಾಡಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದು ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

RELATED ARTICLES

Related Articles

TRENDING ARTICLES