Wednesday, January 22, 2025

ವಾಹನ ಸವಾರರಿಗೆ ಗುಡ್ ನ್ಯೂಸ್ : ಟ್ರಾಫಿಕ್‌ ಫೈನ್‌ ಪಾವತಿಗೆ ಶೇ.50 ರಷ್ಟು ರಿಯಾಯಿತಿ

ಬೆಂಗಳೂರು: ರಾಜ್ಯ ಸರ್ಕಾರವು ವಾಹನಗಳ ಸವಾರಿಗೆ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹವಾಗಿತ್ತು. ಅದ್ರೆ ಇದೀಗ ಮತ್ತೆ ಅದೇ ಮಾದರಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅನುಸರಿಸಲು ಮುಂದಾಗಿದೆ.

ಹೌದು, ಸಂಚಾರಿ ನಿಯಮ ಉಲ್ಲಂಘನೆ ದಂಡದ ಬಾಕಿ ಮೊತ್ತ ಪಾವತಿಗೆ ಶೇ.50 ರಷ್ಟು ರಿಯಾಯಿತಿ ನೀಡಿ ನಿನ್ನೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ತುಂಬು ಗರ್ಭಿಣಿ ಸೇರಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಂದ ಧರಣಿ

 ವಾಹನ ಸವಾರರಿಗೆ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ 

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಮತ್ತೊಮ್ಮೆ 50% ರಿಯಾಯಿತಿಯನ್ನೂರಾಜ್ಯ ಸರ್ಕಾರ ನೀಡಿದ್ದು ಸಾರ್ವಜನಿಕರೂ ಸಂತಸ ತಂದಿದೆ.

ಫೈನ್‌ ಕಟ್ಟಲು ಎಲ್ಲಿಯವರೆಗೂ ಅವಕಾಶ 

ವಾಹನಗಳ ಟ್ರಾಫಿಕ್‌ ದಂಡ ಬಾಕಿ ಉಳಿಸಿಕೊಂಡಿರುವವರು ಮುಂಬರು ಸೆಪ್ಟೆಂಬರ್ 9ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಬಹುದು. ಈ ಮೂಲಕ ವಾಹನದ ಮೇಲಿನ ಎಲ್ಲಾ ದಂಡ ಬಾಕಿ ಪ್ರಕರಣಗಳನ್ನು ಮುಗಿಸಿಕೊಳ್ಳಬಹುದು.

ಫೆ.11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯ 

ಪೊಲೀಸ್‌ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ 2023 ರ ಫೆಬ್ರವರಿ 11ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ಶೇ. 50 ರಷ್ಟು ರಿಯಾಯಿತಿಯು ಅನ್ವಯವಾಗಲಿದೆ. ಆ ನಂತರ ಬಾಕಿ ಇದ್ದ ಪ್ರಕರಣಗಳ ದಂಡವನ್ನು ಪೂರ್ಣ ಕಟ್ಟಬೇಕು ಎಂದು ಸಾರಿಗೆ ಇಲಾಖೆಯು ಆದೇಶದಲ್ಲಿ ತಿಳಿಸಿದೆ.

 

 

 

RELATED ARTICLES

Related Articles

TRENDING ARTICLES