Monday, December 23, 2024

ಸಿದ್ದರಾಮಯ್ಯ ಮಾತಿಗೆ ನಕ್ಕು ನಕ್ಕು ಸುಸ್ತಾದ ಬಿಜೆಪಿ ಶಾಸಕರು

ಬೆಂಗಳೂರು : ಮಾಜಿ ಸಚಿವ ಆರ್. ಅಶೋಕ್ ಭಾಷಣದ ನಡುವೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಶೋಕ್ ಹಾಗೂ ಶಾಸಕ ಯತ್ನಾಳ್ ಕಾಲೆಳೆದ ಪ್ರಸಂಗ ನಡೆಯಿತು.

ವಿಧಾನಸಭೆ ಕಲಾಪದಲ್ಲಿ ಮಾಜಿ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ಉಚಿತ ಗ್ಯಾರಂಟಿಗಳ ಬಗ್ಗೆ ಮಾತು ಆರಂಭಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು, ಮಿಸ್ಟರ್ ಅಶೋಕ್.. ಮಿಸ್ಟರ್ ಯತ್ನಾಳ್ ಸುಮ್ಮನಿರಿ. ಯಾಕೆ  ಇಷ್ಟೊಂದು ಮಾತಾಡ್ತೀರಾ? ಎಂದರು.

ನಿಮ್ಮನ್ನು ವಿಪಕ್ಷ ನಾಯಕ ಮಾಡ್ತಾರೋ, ಇಲ್ಲವೋ ಗೊತ್ತಿಲ್ಲ. ಇಷ್ಟು ಮಧ್ಯೆ ಮಧ್ಯೆ ಎದ್ದು ಮಾತನಾಡ್ತಿದ್ರೆ, ವಿಪಕ್ಷ ನಾಯಕ ಮಾಡ್ತಾರೆ ಅಂದು ಕೊಂಡುಬಿಟ್ಟಿದ್ರಾ? ಅಂತ ಸಿದ್ದರಾಮಯ್ಯ ಕಾಲೆಲೆದರು. ಈ ವೇಳೆ ಸಿಎಂ ಮಾತಿಗೆ ಬಿಜೆಪಿ ಶಾಸಕರು ನಕ್ಕು ನಕ್ಕು ಸುಸ್ತಾದರು.

ಇದನ್ನೂ ಓದಿ : ನಮ್ಗೆ 40% ಕಮಿಷನ್ ಅಂತಿದ್ರು, ಇವರದು 100% ಸರ್ಕಾರ : ರವಿಕುಮಾರ್ ಪಂಚ್

ಇಲ್ಲಿ ಬಂದು ಬುರುಡೆ ಬಿಡ್ತೀರಿ

ಅಧಿವೇಶನ ಪ್ರಾರಂಭವಾಗಿ ಇಂದಿನವರೆಗೆ ಮೂರು ದಿನ ಆಯ್ತು. ಈವರೆಗೂ ಲೀಡರ್ ಆಪ್ ದಿ ಆಪೋಜಿಷನ್ ಲೀಡರ್ ಆಯ್ಕೆ ಮಾಡೋಕೆ ಆಗ್ಲಿಲ್ಲ. ಇಲ್ಲಿ ಬಂದು ಬುರುಡೆ ಬಿಡ್ತೀರಿ. ಇಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಆದ್ರೆ, ಹೆಣ್ಣು ಮಕ್ಕಳಿಗೆ ಫ್ರೀ ಬಸ್ ಕೊಟ್ಟಿರೋ ಬಗ್ಗೆ ಮಾತಾಡ್ತಾರೆ. ಇವರು ಹೆಣ್ಣು ಮಕ್ಕಳ ಪರ ಇದ್ದಾರಾ? ಇಲ್ಲ ವಿರುದ್ಧ ಇದ್ದಾರಾ? ಅಂದಿದ್ದಕ್ಕೆ ಆರ್. ಅಶೋಕ್ ಮತ್ತು ಯತ್ನಾಳ್ ಸುಮ್ಮನಾದರು.

ಗೋಪಾಲಕೃಷ್ಣಗೆ ಸುನೀಲ್ ಟಾಂಗ್

ಬೇಳೂರು ಗೋಪಾಲಕೃಷ್ಣಗೆ ಶಾಸಕ ಸುನೀಲ್ ಕುಮಾರ್ ಟಾಂಗ್ ಕೊಟ್ಟರು. ಅವ್ರು ಮೂರು ಮೂರು ಪಾರ್ಟಿ ಬದಲಾಯಿಸಿ ಬಂದಿದ್ದಾರೆ. ಅದಕ್ಕಾಗಿ ಕನ್ಪ್ಯೂಸನ್ ಆಗಿ ಏನೇನೋ ಮಾತನಾಡ್ತಿದ್ದಾರೆ. ಅದಕ್ಕಾಗಿ ಅವರು ಸರಿಯಾಗಿ ಮಾತಾಡಲು ಹೇಳಿ ಎಂದು ಕಾಲೆಳೆದರು.

RELATED ARTICLES

Related Articles

TRENDING ARTICLES