Wednesday, January 22, 2025

ಸರ್ಕಾರದ ಪತನದ ಬಗ್ಗೆ ಸುಳಿವು ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪತನವಾಗಲಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.ರಾಜಕಾರಣದಲ್ಲಿ ಹೀಗೆ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಇನ್ನೂ ಯಾವುದನ್ನೂ ಅಲ್ಲಗಳೆಯೋದಕ್ಕೆ ಸಾಧ್ಯವಿಲ್ಲ.
ಮಹಾರಾಷ್ಟ್ರ ಸರ್ಕಾರದ ಘಟನೆ ಉಲ್ಲೇಖಿಸಿ ಸರ್ಕಾರ ರಾಜ್ಯದಲ್ಲಿ ಯಾವಾಗ ಬೇಕಿದ್ರೂ ಪತನವಾಗಬಹುದು ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಚಾರ ಮಾತನಾಡಿದ ಅವರು ಈಗಲೇ ಪ್ರಮುಖ ನಾಯಕರ ಜೊತೆ ಚರ್ಚೆ ಆಗಿದೆ. ಇಂದು, ಅಥವಾ ನಾಳೆ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತೆ ರಾಷ್ಟ್ರ ನಾಯಕರು ಬೇರೆ ರಾಜ್ಯದ ವಿಚಾರದಲ್ಲಿ ಬ್ಯುಸಿ ಆಗಿದ್ರು ಹೀಗಾಗಿ ತಡವಾಗಿದೆ ಎಂದಿದ್ದಾರೆ.

ಇನ್ನೂ  ಬಿಟ್ ಕಾಯಿನ್ ಮರು ತನಿಖೆ ವಿಚಾರ ಮಾತನಾಡಿ 2013 ರಿಂದ 2023 ರಗೆ ಯಾವ್ಯಾವ ಕಮಿಷನ್ ಮುಂದೆ ಆಪಾದನೆಗಳಿವೆ ಎಲ್ಲವೂ ತನಿಖೆ ಆಗಬೇಕು ಎಂದು ಹೇಲಿದ್ದಾರೆ.

RELATED ARTICLES

Related Articles

TRENDING ARTICLES