ಬೆಂಗಳೂರು : ದಾಸನ ಫ್ಯಾನ್ಸ್ ಹಬ್ಬ ಮಾಡೋ ಸುದ್ದಿಯೊಂದು ರಿವೀಲ್ ಆಗಿದೆ. ಸದ್ದಿಲ್ಲದೆ ಸೈಲೆಂಟ್ ಆಗಿದ್ದ ವೀರ ಸಿಂಧೂರ ಲಕ್ಷ್ಮಣ ಸಿನಿಮಾ ಮತ್ತೆ ಜೀವ ಪಡೆದುಕೊಂಡಿದೆ.
ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಕಾಂಬೋನಲ್ಲಿ ಈ ಚಿತ್ರ ತಯಾರಾಗಲಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಇದೀಗ, ಸಿನಿಮಾ ನಿರ್ಮಾಣ ಆಗೋದು ಪಕ್ಕಾ ಆಗಿದೆ.
ಸಿಂಧೂರ ಲಕ್ಷ್ಮಣ ಪ್ರಾಜೆಕ್ಟ್ ಎರಡ್ಮೂರು ತಿಂಗಳಲ್ಲಿ ಅಫಿಶಿಯಲಿ ಅನೌನ್ಸ್ ಆಗುತ್ತದೆ. 2024ಕ್ಕೆ ಶೂಟಿಂಗ್ ಪ್ರಾರಂಭ ಆಗುತ್ತದೆ. ಸಿಂಧೂರ ಲಕ್ಷ್ಮಣ ಪ್ರಾಜೆಕ್ಟ್ ನಲ್ಲಿ ಡಿ ಬಾಸ್ ಇರ್ತಾರಾ? ಅಲ್ವಾ? ಅನ್ನೋ ಬಗ್ಗೆ ಮಾತ್ರ ಬಹಿರಂಗವಾಗಿಲ್ಲ.
ರಾಬಿನ್ಹುಡ್ ಆಗಿ ಘರ್ಜನೆ
1920ರಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಉತ್ತರ ಕರ್ನಾಟಕ ಭಾಗದ ಸಿಂಧೂರ ಲಕ್ಷ್ಮಣ, ಇತಿಹಾಸ ಪುಟಗಳಲ್ಲಿ ರಾರಾಜಿಸ್ತಿದ್ದಾರೆ. ಇಂದಿಗೂ ಸಿಂಧೂರ ಲಕ್ಷ್ಮಣನ ಕುರಿತು ತರಹೇವಾರಿ ಕಥೆಗಳ ರೂಪದಲ್ಲಿ ಮಾತನಾಡಿಕೊಳ್ಳುತ್ತಾರೆ. ಅಸಹಕಾರ ಚಳುವಳಿ ಶುರುವಾದ ಸಂದರ್ಭದಲ್ಲಿ ಬ್ರಿಟೀಷರಿಂದ ಸಂಗ್ರಹವಾಗುತ್ತಿದ್ದ ತೆರಿಗೆಯನ್ನು ಲೂಟಿ ಮಾಡಿ, ಬಡವರಿಗೆ ಹಂಚುತ್ತಿದ್ದ ಸಿಂಧೂರ ಲಕ್ಷ್ಮಣ ಅಕ್ಷರಶಃ ರಾಬಿನ್ಹುಡ್ ಆಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ನಿದ್ದೆಗೆಡಿಸಿದ್ದರಂತೆ.
ಇದನ್ನೂ ಓದಿ : ವಿರಾಜಪೇಟೆಯಲ್ಲಿ ‘ಗಜ’ಪಡೆ : ಇಲ್ಲಿದೆ ‘ಕಾಟೇರ’ನ ಆಫ್ ರೋಡ್ ಸ್ಟೋರಿ ‘ದರ್ಶನ’
ಹೀರೋ, ಡೈರೆಕ್ಟರ್ ಬದಲಾಗ್ತಾರಾ?
ಆ ರಾಬಿನ್ಹುಡ್ ಕುರಿತ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಉಮಾಪತಿ ಅವರು ಹೇಳಿಕೊಂಡಿದ್ದರು. ಆಗ ದರ್ಶನ್ ಅವರೇ ನಾಯಕ, ತರುಣ್ ಸುಧೀರ್ ಅವರೇ ನಿರ್ದೇಶಕ ಅಂತ ಹೇಳಲಾಗಿತ್ತು. ರಾಬರ್ಟ್ ಚಿತ್ರದ ಬಳಿಕ ಆದಂತಹ ಬೆಳವಣಿಗೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾಗಿ ಹೀರೋ, ಡೈರೆಕ್ಟರ್ ಬದಲಾದರೂ ಅಚ್ಚರಿಯಿಲ್ಲ ಎನ್ನುವ ಉಮಾಪತಿ, 2024ಕ್ಕೆ ಸಿನಿಮಾ ಪ್ರಾರಂಭ ಮಾಡೋದು ಮಾತ್ರ ಪಕ್ಕಾ ಅಂತ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.
ದಚ್ಚುಗೆ ಉಮಾಪತಿ ಕೊಟ್ಟಿದ್ರು ಅಡ್ವಾನ್ಸ್
ನಟ ದರ್ಶನ್ ಅವರು ಉಮಾಪತಿ ಅವರಿಂದ ಎರಡೂ ಕಾಲು ಕೋಟಿ ಅಡ್ವಾನ್ಸ್ ಪಡೆದು ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದರು. ಸಿಂಧೂರ ಲಕ್ಷ್ಮಣ ಆದರೆ ಚೆನ್ನಾಗಿರುತ್ತದೆ ಅನ್ನೋದು ಎಲ್ಲರ ಆಶಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬಳಿಕ ಮಗದೊಮ್ಮೆ ಸ್ವತಂತ್ರ್ಯ ಹೋರಾಟಗಾರನಾಗಿ ದರ್ಶನ್ ಪ್ರಜ್ವಲಿಸಲಿದ್ದಾರೆಯೇ ಅಂತ ಕಾದುನೋಡಬೇಕಿದೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ