Monday, December 23, 2024

ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದತೆ

ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಜಿ‌ ಸಿಎಂ ಕುಮಾರಸ್ವಾಮಿ ರಣತಂತ್ರ ಎಣೆದಿದ್ದಾರೆ.

ಇದನ್ನೂ ಓದಿ: ಗ್ಯಾರೆಂಟಿ ಸ್ಕೀಂ: ಯಾವುದೇ ಷರತ್ತು ವಿಧಿಸದೇ ಜಾರಿಗೆಒತ್ತಾಯಿಸಿ ಇಂದು ಬಿಜೆಪಿ ಪ್ರತಿಭಟನೆ

ಸದನದ ಕಾರ್ಯಕಲಾಪಗಳ ಆರಂಭಕ್ಕೂ ಮೊದಲೇ ಸರ್ಕಾರದ ವಿರುದ್ದ ಕಿಡಿಕಾರುತ್ತಿದ್ದ ಹೆಚ್​ಡಿಕೆ, ಇಂದಿನಿಂದ ಸದನದ ಒಳಗೆ ಸರ್ಕಾರದ ಮೇಲೆ ಮುಗಿಬಿಳಲು ಸಾಕಷ್ಟು ತಯಾರಿ ನಡೆಸಿ ಬಿಜೆಪಿ ನಾಯಕರಿಗಿಂತ ಹೆಚ್ಚು ಆಕ್ಟಿವ್​ ಆಗಿದ್ದಾರೆ.

ಗ್ಯಾರಂಟಿಗಳ ಸಂಪೂರ್ಣ ಜಾರಿಗೆ ಒತ್ತಾಯ ಸೇರಿದಂತೆ, ಸರ್ಕಾರದ ವರ್ಗಾವಣೆ ದಂಧೆ, ಇಲಾಖೆಗಳ ಭ್ರಷ್ಟಾಚಾರ, ಅನಗತ್ಯ ಬೆಲೆ ಏರಿಕೆ, ಗ್ಯಾರಂಟಿಗಳ ಜಾರಿಗೆ ಷರತ್ತುಗಳು, ನಿನ್ನೆಯ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಎಲ್ಲಾ ವಿಚಾರ ಪ್ರಸ್ತಾಪ ಮಾಡಲು ದಾಖಲೆ ಸಮೇತ ವಿಧಾನಸಭೆಯಲ್ಲಿ ಅಬ್ಬರಿಸಲು ಕುಮಾರಸ್ವಾಮಿ ಸಿದ್ದತೆಮಾಡಿಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES