ಬೆಂಗಳೂರು : ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಆಶ್ರಯಿಸಿರುವ ಬಿಜೆಪಿಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಅಧಿಕಾರ ನಡೆಸಲು ಮಾತ್ರ ಅವರಿಗೆ ಯಡಿಯೂರಪ್ಪಗೆ ವಯಸ್ಸಾಗಿತ್ತೇ? ಈಗ ಅವರಿಗೆ ಹದಿನೆಂಟರ ಹರೆಯವೇ? ಎಂದು ಛೇಡಿಸಿದೆ.
ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದೀರಿ. ವಯಸ್ಸಿನ ಕಾರಣ ನೀಡಿದ್ದೀರಿ. ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರಿಡ್ಂ ಪಾರ್ಕಿನಲ್ಲಿ ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು ಎಂದು ಕುಟುಕಿದೆ.
ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಿ ಪದಚ್ಯುತಿಗೊಳಿಸಿ ನಂತರ ವಯಸ್ಸಿನ ಕಾರಣ ನೀಡಿದ ಬಿಜೆಪಿ ಈಗ ರಾಜಕೀಯ ಕಾರಣಕ್ಕಾಗಿ ಅವರನ್ನು ಫ್ರಿಡಂ ಪಾರ್ಕಿನಲ್ಲಿ, ಬಿಸಿಲು, ಮಳೆಯಲ್ಲಿ ಕೂರಿಸುತ್ತಿರುವುದು ನಾಚಿಕೆಗೇಡು.
ಅಧಿಕಾರ ನಡೆಸಲು ಮಾತ್ರ ಅವರಿಗೆ ವಯಸ್ಸಾಗಿತ್ತೇ, ಈಗ ಅವರಿಗೆ ಹದಿನೆಂಟರ ಹರೆಯವೇ @BJP4Karnataka?
ಬೇಕಾದಾಗ ಬಳಸಿ, ಬೇಡವಾದಾಗ…
— Karnataka Congress (@INCKarnataka) July 4, 2023
ಇದನ್ನೂ ಓದಿ : ಡಿಕೆಶಿ ರಾಜಾ ಹರಿಶ್ಚಂದ್ರನಿಗಿಂತ ಸತ್ಯವಂತರಿದ್ದಾರೆ : ಶಾಸಕ ಯತ್ನಾಳ್ ಪಂಚ್
ಟಿಶ್ಯು ಪೇಪರ್ ಅಂದುಕೊಂಡಿದ್ದೀರಾ?
ಬಿಜೆಪಿ ನಾಯಕರೇ, ಬೇಕಾದಾಗ ಬಳಸಿ, ಬೇಡವಾದಾಗ ಬಿಸಾಡುವುದಕ್ಕೆ ಬಿ.ಎಸ್ ಯಡಿಯೂರಪ್ಪ ಅವರನ್ನು ಟಿಶ್ಯು ಪೇಪರ್ ಎಂದುಕೊಂಡಿದ್ದೀರಾ? ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿಯ ಸಂಸ್ಕೃತಿ ಎಂದು ಚಾಟಿ ಬೀಸಿದೆ.
ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ @BJP4Karnataka ರಾಜಕೀಯದಿಂದ ದೂರ ತಳ್ಳಿದ್ದ BSYರನ್ನೇ ಮತ್ತೆ ಆಶ್ರಯಿಸಿದ್ದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ.
ಅಗತ್ಯವಿದ್ದಾಗ ಕಾಲು ಹಿಡಿಯುವುದು, ಅಗತ್ಯವಿಲ್ಲದಾಗ ಕಾಲು ಎಳೆಯುವುದು ಬಿಜೆಪಿ ಸಂಸ್ಕೃತಿ!
— Karnataka Congress (@INCKarnataka) July 4, 2023
ಒಬ್ಬ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ, ರಾಜಕೀಯದಿಂದ ದೂರ ತಳ್ಳಿದ್ದ ಬಿ.ಎಸ್ ಯಡಿಯೂರಪ್ಪ ಅವರನ್ನೇ ಮತ್ತೆ ಆಶ್ರಯಿಸಿದೆ. ಇದು ಬಿಜೆಪಿಯ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿಗೆ ಟಕ್ಕರ್ ಕೊಟ್ಟಿದೆ.