Wednesday, January 22, 2025

ದಾಖಲೆ ಕೊಡೋ ಧಮ್ಮು-ತಾಕತ್ತು ನನಗೆ ಇದೆ : ಕುಮಾರಸ್ವಾಮಿ ಪಂಚ್

ಬೆಂಗಳೂರು : ನಾನು ದಾಖಲೆ ಕೊಡ್ತೀನಿ ತನಿಖೆ ಮಾಡೋ ಧಮ್ ಇದ್ಯಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ‘ಕೈ’ ಕಲಿಗಳಿಗೆ ಸವಾಲ್ ಹಾಕಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳ ವಿರುದ್ಧ ಹರಿಹಾಯ್ದರು.

ಕಳೆದ ಎರಡು ವರ್ಷದಿಂದ ಒಂದು ದಾಖಲೆ ನೀಡಿಲ್ಲ. ಪ್ರತಿನಿತ್ಯ ತನಿಖೆ.. ತನಿಖೆ.. ಅಂತ ಹೇಳುತ್ತಿದ್ದಾರೆ. ಇನ್ನೂ ಹನಿಮೂನ್ ಪೀರಿಯಡ್ ಅಂತ ಹೇಳ್ತಾರೆ ಕಾಂಗ್ರೆಸ್‌ ನವರು. ಹನಿಮೂನ್ ಪೀರಿಯಡ್ ನಲ್ಲಿ ಹೀಗಾದ್ರೆ ಹೇಗೆ. ದಾಖಲೆ ಕೊಡ್ತೀನಿ ತನಿಖೆ ಮಾಡೋ ಧಮ್ ಇದ್ಯಾ? ಅಂತ ಛೇಡಿಸಿದರು.

ಇದನ್ನೂ ಓದಿ : ಸಿದ್ರಾಮಯ್ಯ ಕುರ್ಚಿ ಖಾಲಿ ಮಾಡಲ್ಲ, ಡಿಕೆಶಿಗೆ ಕುರ್ಚಿ ಸಿಗಲ್ಲ : ಶಾಸಕ ಯತ್ನಾಳ್ ಭವಿಷ್ಯ

ನನ್ಗೆ ದಾಖಲೆ ಕೊಡೋ ಧಮ್ಮು ಇದೆ

ನನ್ನ ಕಾಲದಲ್ಲಿ ನಡೆದ ಎಲ್ಲಾ ವರ್ಗಾವಣೆಯನ್ನು ತನಿಖೆ ಮಾಡಲಿ. ಕಾಂಗ್ರೆಸ್ ನವರು ಹಗಲು ದರೋಡೆಗೆ ಇಳಿದಿದ್ದಾರೆ. ವರ್ಗವಣೆ ಧಂದೆಗೆ ಹಣ ನಿಗಧಿ ಮಾಡಿದ್ದೀರಾ ಅಂತ ಗೊತ್ತು. ಟೈಮ್ ಬಂದಾಗ ದಾಖಲೆ ಕೊಡ್ತೀನಿ. ದಾಖಲೆ ಕೊಡೋ ಧಮ್ಮು ತಾಕತ್ತು ನನಗೆ ಇದೆ. ಸಚಿವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ತೀರಾ ಅಂತ ಮೊದಲು ಅವರು ಹೇಳಲಿ ಎಂದು ಚಾಟಿ ಬೀಸಿದರು.

ಡಿಕೆಶಿ ಕೂಡ ಟವಲ್ ಹಾಕಿದ್ದಾರೆ

ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿರುತ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕೆಲವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿ ಅಂತಿದ್ದಾರೆ. ಈಗಾಗಲೇ ಡಿ.ಕೆ ಶಿವಕುಮಾರ್ ಕೂಡ ಟವಲ್ ಹಾಕಿದ್ದಾರೆ. ನೋಡೋಣ ಎಷ್ಟು ದಿನ ಇರುತ್ತೆ ಸರ್ಕಾರ ಅಂತ ಎಂದು ಟಕ್ಕರ್ ಕೊಟ್ಟರು.

RELATED ARTICLES

Related Articles

TRENDING ARTICLES