Monday, December 23, 2024

ಒಂದಕ್ಕಿಂತ ಹೆಚ್ಚು ಮೀಟರ್​ಗಳಿಗೆ ಅರ್ಜಿ ಸಲ್ಲಿಸಿದ್ದರೇ ಅರ್ಜಿ ವಜಾ: ಬೆಸ್ಕಾಂ ಎಂ.ಡಿ ಮಹಂತೇಶ್ ಬೀಳಗಿ

ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ ಒಂದಕ್ಕಿಂತ ಹೆಚ್ಚು ಮೀಟರ್ ಗಳಿಗೆ ಅರ್ಜಿ ಸಲ್ಲಿಸಿದ್ದರೆ ಅಂಥ ಅರ್ಜಿ ವಜಾಗೊಳಿಸಲಾಗುವುದು ಎಂದು ಬೆಸ್ಕಾಂ ಎಂ.ಡಿ ಮಹಂತೇಶ್ ಬೀಳಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಎಸ್​ಎಸ್​ಎಲ್​​ಸಿ ಪೂರಕಪರೀಕ್ಷೆ ಮರುಎಣಿಕೆಗೆ ಅರ್ಜಿ ಸಲ್ಲಿಕೆ ಆರಂಭ

ನಗರದ ಬೆಸ್ಕಾಂ ಕಛೇರಿಯಲ್ಲಿ ಮಾತನಾಡಿದ ಅವರು,  ಗೃಹಜ್ಯೋತಿ ಯೋಜನೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಗ್ರಾಹಕರು ಒಂದು ಮೀಟರ್ ಗಿಂತ ಹೆಚ್ಚು ಮೀಟರ್​ಗಳಿಗೆ ಅರ್ಜಿ ಸಲ್ಲಿಸಿದ್ದರೇ ಪರಿಶೀಲನೆ ನಡೆಸಿ ಅಮಾನ್ಯಗೊಳಿಸಲಾಗುವುದು ಎಂದಿದ್ದಾರೆ.

ಗೃಹಜ್ಯೋತಿ ಯೋಜನೆ ದುರ್ಬಳಕೆಯಾಗಬಾರದು ಎಂದು ಕಾರಣಕ್ಕೆ ಇ-ಗವರ್ನೆನ್ಸ್ ಮೂಲಕ ಈಗಾಗಲೇ ಸಲ್ಲಿಯಾಗಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಒಂದಕ್ಕಿಂತ ಹೆಚ್ಚು ಮೀಟರ್​ ಗಳಿಗೆ ಅರ್ಜಿಗಳು ಬಂದಿದ್ದರೇ ಅಮಾನ್ಯಗೊಳಿಸಲಾಗುವುದು ಮತ್ತು 200 ಯೂನಿಟ್‌ ಒಳಗಿರುವ ಮೀಟರ್ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES