Wednesday, January 22, 2025

ಏನಿದು YST,VST ದಳಪತಿ ದಾಳದ ಒಳಮರ್ಮವೇನು ಟ್ಯಾಕ್ಸ್ ಪಾಲಿಟಿಕ್ಸ್​ನ ಫುಲ್ ಡೀಟೆಲ್ಸ್ ಇಲ್ಲಿದೆ ನೋಡಿ…

ನಾಳಿನ ಸದನದಲ್ಲಿ ಸದ್ದು ಮಾಡಲಿರುವ ಅಧಿಕಾರಿಗಳ ವರ್ಗಾವಣೆ ದಂಧೆ, ಸಿದ್ದು 2.0 ಸರ್ಕಾರದ ಬೆವರಿಳಿಸಲಿರುವ ವಿಪಕ್ಷಗಳು​…!

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ವರ್ಗಾವಣೆ ದಂಧೆಯು ಸಾಕಷ್ಟು ಸದ್ದು ಮಾಡುತ್ತಿದೆ.‌ ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತಷ್ಟು ಸ್ಪೋಟಕ ಮಾಹಿತಿ ಹೊರಹಾಕಿದ್ದು, ಸರ್ಕಾರವನ್ನು ‌ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೇ ಬಿಜೆಪಿ ನಾಯಕರು ಈ ಆರೋಪಕ್ಕೆ ಮತ್ತಷ್ಟು ತುಪ್ಪಸುರಿದಿದ್ದು ಸದನದಲ್ಲೂ ಈ ವಿಚಾರ ಪ್ರತಿಧ್ವನಿಸಲಿದೆ.

ಟ್ರಾನ್ಸ್ಫರ್ ದಂಧೆಯ ಬಗ್ಗೆ ಎಚ್ ಡಿ ಕೆ ಸ್ಪೋಟಕ ಮಾಹಿತಿ….

ಶಾಸಕರ ಲೆಟರ್ ಇದ್ದರೆ ಸಾಕಾಗಲ್ಲ 30 ಲಕ್ಷ ಕೊಡ್ಬೇಕು ಎಂದ ದಳಪತಿ..

ಹೌದು.. ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ವರ್ಗಾವಣೆ ದಂಧೆಯ ಆರೋಪವನ್ನು ಮಾಡುತ್ತಾ ಬಂದಿದ್ದಾರೆ. ಕಳೆದ ಭಾನುವಾರವಷ್ಟೇ ವೈಎಸ್ ಟಿ (YST) ಕಲೆಕ್ಷನ್ ಆಗುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಯ ಸಿಂಡಿಕೇಟ್ ಇದೆ. ಸಬ್‌ರಿಜಿಸ್ಟ್ರಾರ್‌ ಸಿಂಡಿಕೇಟ್ ಇದೆ ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಸಿಂಡಿಕೇಟ್ ಕೂಡ ಶುರುವಾಗಿದೆ.

ಇದೀಗ ವರ್ಗಾವಣೆಯ ಸಿಂಡಿಕೇಟೂ ಶುರುವಾಗಿದೆ. ಆಯಾ ಇಲಾಖೆಯಲ್ಲಿ ಕೆಲವು ಸಿಂಡಿಕೇಟ್ ಗಳು ಕೆಲಸ ಮಾಡುತ್ತಿವೆ. ಈ ಸಿಂಡಿಕೇಟ್ ಗಳು ಯಾರು  ಯಾರು ವರ್ಗಾವಣೆ ಆಗಬೇಕು ಅಂತಾ ಲಿಸ್ಟ್ ಕೊಡುತ್ತಾರೋ ಅದರಂತೆ ವರ್ಗಾವಣೆ ನಡೆಯುತ್ತೆ ಎಂದಿದ್ದಾರ . ಹಾಗೆನೇ ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ..30 ಲಕ್ಷ ಕೊಡದೇ ಹೊದರೆ ಕೆಲಸ ಆಗೊಲ್ಲ ಅಂತ ಸಿಎಂ ಕಚೇರಿಯಲ್ಲಿ ಹೇಳ್ತಾರೆ ಎಂದು ಸಿಎಂ ‌ಕಚೇರಿ ವಿರುದ್ದ ಕಮಿಷನ್ ಬಾಂಬ್ ಸಿಡಿಸಿದ್ದಾರೆ.

ಎಚ್.ಡಿ.ಕೆ.ಆರೋಪಕ್ಕೆ ಕೈಜೋಡಿಸಿದ ಬಿಜೆಪಿ…

ಇನ್ನೂ ವರ್ಗಾವಣೆ ದಂಧೆ ಬಗೆಗಿನ ಕುಮಾರಸ್ವಾಮಿ ‌ಆರೋಪಕ್ಕೆ ಬಿಜೆಪಿಯೂ ಕೈಜೋಡಿಸಿದೆ. ಅಲ್ಲದೇ ಈ ವಿಚಾರವನ್ನು ಸದನದಲ್ಲಿ ಪ್ರತ್ಯೇಕ ಅಸ್ತ್ರವನ್ನಾಗಿ ಬಳಸಲು ಕೇಸರಿ ಪಡೆ ‌ನಿರ್ಧರಿಸಿದೆ. ಅಂದಹಾಗೆ ‌ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿದ್ದಾರೆ, ಅವರಿಗೆ ಸಾಕಷ್ಟು ಸೋರ್ಸ್ ಇರುತ್ತದೆ. ಕ್ಯಾಬಿನೆಟ್ ನಲ್ಲೂ ಏನಾಗುತ್ತಿದೆ ಎಂದು ಕುಮಾರಸ್ವಾಮಿಯವರಿಗೆ ಗೊತ್ತಾಗುತ್ತೆ.

ಇದನ್ನೂ ಓದಿ : ಟ್ರಕ್ ಪಲ್ಟಿ : ಓರ್ವ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಾಯ

ವರ್ಗಾವಣೆ ದಂಧೆಯಲ್ಲಿ ರಾಹುಲ್, ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸೇರಿ ಎಲ್ಲರ ಪಾಲು ಇದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು‌ ಜರಿದಿದ್ದಾರೆ. ಜೊತೆಗೆ ಸರ್ಕಾರದ ವಿರುದ್ದ ಹರಿಹಾಯ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,ಐಎಎಸ್, ಐಪಿಎಸ್ ವರ್ಗಾವಣೆ ಹಲವಾರು ಬಾರಿ ಕ್ಯಾನ್ಸಲ್ ಆಗಿದೆ. ಇದೇ ವರ್ಗಾವಣೆ ದಂಧೆಗೆ ಮಹತ್ವದ ಸಾಕ್ಷಿಯಾಗಿದೆ. ನಮ್ಮ ಅವಧಿಯಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದ್ರಿ.ಆಗ ಸಾಕ್ಷ್ಯ ಕೇಳಿದಾಗ ಕೊಡೋಕೆ ಆಗಲಿಲ್ಲ ಎಂದು ಸರ್ಕಾರವನ್ನು ಕುಟುಕಿದ್ದಾರೆ.

YST,VSTಯ ಸಾಕ್ಷ್ಯ ನೀಡಿ ಎಚ್ ಡಿ ಕೆಗೆ ಪ್ರಿಯಾಂಕ ತಿರುಗೇಟು..!

ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದು,
YST ಮತ್ತು VST ಟ್ಯಾಕ್ಸ್ ಬಗ್ಗೆ ಸಾಕ್ಷಿಗಳು ಇದ್ದರೆ ಕೊಡಿ..ಅದರ ಬಗ್ಗೆ ನಾವು ತನಿಖೆ ಮಾಡುತ್ತೇವೆ. ರಾಜ್ಯದ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಅದನ್ನು ತೊಳೆಯುವ ಕೆಲಸ ನಾವು ಮಾಡುತ್ತಿದ್ದೇವೆ. 40% ಕಮಿಷನ್ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದೇವೆ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ.

ಅಲ್ಲದೆ ಹಿಂದಿನ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರ ಆರೋಪ ಮಾಡಿದ್ವಿ. ಆದರೆ ಅದರ ದಾಖಲೆ ಇಟ್ಟುಕೊಂಡು ನಾವು ಮಾತನಾಡಿದ್ದೇವೆ. ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಎಸೆದಿದ್ದಾರೆ.

ಯಾರ ಕೈ ಮೇಲು….?

ಒಟ್ಟಿನಲ್ಲಿ ಸದನದ ಹೊರಗಡೆ ಸಾಕಷ್ಟು ‌ಸದ್ದು ಮಾಡಿರೋ‌ ವಿಪಕ್ಷಗಳು, ‌ಸದನದ ಒಳಗೂ ಸಿದ್ದು ಸರ್ಕಾರವನ್ನು ಇಕ್ಕಟ್ಟಿಗೆ ‌ಸಿಲುಕಿಸಲು‌ ಹೊರಟಿವೆ. ಆದ್ರೆ ಸಿಎಂ ಸಿದ್ದರಾಮಯ್ಯ ಇದಕ್ಕೆ ತಕ್ಕ ಪ್ರತ್ಯುತ್ತರ ‌ಕೊಡಲು ಸಿದ್ದರಾಗಿದ್ದಾರೆ. ಅಲ್ಲದೇ ವರ್ಗಾವಣೆ ‌ಮತ್ತು ಶಿಪಾರಸ್ಸು ಪತ್ರ ‌ಕೊಡೋದು ಆಡಳಿತವೇ ಎಂದು‌ ವಿಪಕ್ಷಗಳ‌ ಬಾಯಿ ಮುಚ್ಚಿಸಲು ಹೊರಟಿದೆ.

ಟ್ಯಾಕ್ಸ್ ವಿತ್ ಟ್ರಾನ್ಸ್ಫರ್ ಆರೋಪವನ್ನು ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ಎದುರಿಸಲಿದೆ ಹಾಗೂ ಈ ರಾಜಕೀಯ ಸಂಘರ್ಷದಲ್ಲಿ ಯಾರ ಕೈ ಮೇಲಾಗುತ್ತದೆ‌ ಅನ್ನೊದನ್ನ ಕಾದುನೋಡಬೇಕಿದೆ….

RELATED ARTICLES

Related Articles

TRENDING ARTICLES