Monday, December 23, 2024

ಆತ್ಮ ರಕ್ಷಣೆಗಾಗಿ ರೌಡಿ ಶೀಟರ್ ಕಾಲಿಗೆ ಪಿಎಸ್ಐ ಗುಂಡೇಟು

ಶಿವಮೊಗ್ಗ :- ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಸೈಫು ಕಾಲಿಗೆ ಪೋಲಿಸರು ಪೋಲಿಸರು ಹಾರಿಸಿದ್ದಾರೆ. ಸಮಾಜದಲ್ಲಿ ತನ್ನ ದುಷ್ಕ್ರತ್ಯಗಳಿಂದ ಅಶಾಂತಿಗೆ ಕಾರಣನಾಗಿ ಡಕಾಯಿತಿ,ರಾಬರಿ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಈಗ ಪೋಲಿಸ್ ಬಲೆಗೆ ಬಿದ್ದಿದ್ದಾನೆ.

ರೌಡಿ ಸೈಫು ವಿರುದ್ದ ಶಿವಮೊಗ್ಗದ ದೊಡ್ಡಪೇಟೆ, ಜಯನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಎನ್​ಡಿಪಿಎಸ್ (NDPS) ಕಾಯ್ದೆಯಡಿ ಒಟ್ಟು 18 ಪ್ರಕರಣಗಳು ದಾಖಲಾಗಿದ್ದವು.

ಜಯನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ307 ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರಿಗೆ ಬೇಕಾಗಿದ್ದ ಮುಖ್ಯ ಆರೋಪಿಯಾಗಿದ್ದ ಸೈಫು ಹಾಗೂ ಈತನ ಸಹಚರ ಪುಡಿ ರೌಡಿ ಪೌಝೂನ್.

ಇದನ್ನೂ ಓದಿ : ಏನಿದು YST,VST ದಳಪತಿ ದಾಳದ ಒಳಮರ್ಮವೇನು ಟ್ಯಾಕ್ಸ್ ಪಾಲಿಟಿಕ್ಸ್​ನ ಫುಲ್ ಡೀಟೆಲ್ಸ್ ಇಲ್ಲಿದೆ ನೋಡಿ…

ಆರೋಪಿಗಳನ್ನು ಬಂಧಿಸಲು ಪಿಎಸ್ಐ ನವೀನ್ ನೇತೃತ್ವದ ತಂಡ ತೆರಳಿತ್ತು. ಬಂಧನದ ವೇಳೆ ರೌಡಿ ಸೈಫುಲ್ಲಾ ಪೋಲಿಸ್ ಸಿಬ್ಬಂದಿಗಳಾದ ಸಚಿನ್,ನಾಗರಾಜ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕಾರ್ಯಾಚರಣೆಗೆ ತೆರಳಿದ್ದ ಪಿಎಸ್ಐ ನವೀನ್ ತಮ್ಮ ಆತ್ಮ ರಕ್ಷಣೆಗಾಗಿ ರೌಡಿಶೀಟರ್ ಸೈಫುಲ್ಲಾ ಕಾಲಿಗೆ ಗುಂಡು ಹಾರಿಸಿದ್ದಾರೆ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ಎಸ್​ಪಿ ಮಿಥನ್ ಕುಮಾರ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES