Wednesday, January 22, 2025

ಸುಮ್ನೆ ಹಿಟ್​ ಅಂಡ್​​ ರನ್​ ಬೇಡ – ಹೆಚ್ಡಿಕೆ ಆರೋಪಕ್ಕೆ ಸಚಿವ ಪ್ರಿಯಾಂಕ್​ ಖರ್ಗೆ ಪ್ರತಿಕ್ರಿಯೆ

ಬೆಂಗಳೂರು: ವೈಎಸ್​​ಟಿ ಮತ್ತು ವಿಎಸ್​ಟಿ ಟ್ಯಾಕ್ಸ್ ಬಗ್ಗೆ ಸಾಕ್ಷ್ಯಿಗಳು ಇದ್ದರೆ ಕೊಡಿ ಅದರ ಬಗ್ಗೆ ನಾವು ತನಿಖೆ ಮಾಡ್ತೀವಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ಮಾಜಿ ಸಿಎಂ ಹೆಚ್ಡಿಕೆ ಅವರು ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಹಣ ಪಡೆದು ಸಿನಿಮಾ ಮಾಡ್ತಿಲ್ಲ; ಕಿಚ್ಚ ಸುದೀಪ್ ವಿರುದ್ದ ನಿರ್ಮಾಪಕ ಆರೋಪ

ಕಾಂಗ್ರೆಸ್ ಸರ್ಕಾರದ ಮೇಲೆ ಹೆಚ್ಡಿಕೆ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ವೈಎಸ್​ಟಿ ಅಂದ್ರೆ ಏನು ಅನ್ನೊದರ ಬಗ್ಗೆ ಮೊದಲು ಹೇಳಿ? ಹೆಚ್ ಡಿ ಕುಮಾರಸ್ವಾಮಿ ಹಿರಿಯರಿದ್ದಾರೆ ನೋಡಿಕೊಂಡು ಮಾತಾಡಬೇಕು ಎಂದರು.

ಸುಮ್ಮನೆ ಹಿಟ್ ಆಂಡ್ ರನ್ ಬೇಡ. ರಾಜ್ಯದ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಅದನ್ನು ತೊಳೆಯುವ ಕೆಲಸ ನಾವು ಮಾಡ್ತಿದ್ದೇವೆ. 40% ಕಮಿಷನ್ ಬಗ್ಗೆ ಕೂಡ ತನಿಖೆ ನಡೆಸ್ತಿದ್ದೇವೆ. ಹಿಂದಿನ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರ ಆರೋಪ ಮಾಡಿದ್ವಿ. ಅದರ ದಾಖಲೆ ಇಟ್ಟುಕೊಂಡು ನಾವು ಮಾತಾಡಿದ್ದೇವೆ. ಹೆಚ್ಡಿಕೆ ಅವರ ಬಳಿ ದಾಖಲೆ ಇದ್ದರೆ ತೋರ್ಸಿ ಎಂದಿದ್ದಾರೆ.

RELATED ARTICLES

Related Articles

TRENDING ARTICLES