Monday, December 23, 2024

ವಿಧಾನಮಂಡಲ ಅಧಿವೇಶನ : ಬಿಜೆಪಿಗೆ ಕಗ್ಗಂಟಾದ ವಿಪಕ್ಷ ನಾಯಕ ಆಯ್ಕೆ

ಬೆಂಗಳೂರು : ಇಂದಿನಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಕಗ್ಗಂಟಾಗಿದ್ದು ಬಿಜೆಪಿ ಪಕ್ಷದಲ್ಲಿ ಸಮರ್ಥನಾಯಕ ಸಿಕ್ಕಿಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ಇಂದಿನಿಂದ ಅಧಿವೇಶನ ಆರಂಭ: ವಿಪಕ್ಷಗಳು ಕೋಲಾಹಲ ಸೃಷ್ಟಿಸಲು ತಯಾರಿ

ಇಂದು ಸಂಜೆ 6 ಗಂಟೆಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಕೇಂದ್ರದಿಂದ ವೀಕ್ಷಕರಾಗಿ ಮನ್ಸುಖ್ ಮಾಂಡವೀಯ, ವಿನೋದ್ ತವಡೆ ಆಗಮಿಸಲಿದ್ದಾರೆ, ಶಾಸಕರ ಅಭಿಪ್ರಾಯ ಪಡೆದು ವರಿಷ್ಠರಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ ಬಳಿಕ ವೀಕ್ಷಕರ ವರದಿ ಆಧರಿಸಿ ವಿರೊಧ ಪಕ್ಷದ ನಾಯಕನನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ ಎಂದು ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES