Wednesday, January 22, 2025

ಇಂದಿನಿಂದ ಅಧಿವೇಶನ ಆರಂಭ: ವಿಪಕ್ಷಗಳು ಕೋಲಾಹಲ ಸೃಷ್ಟಿಸಲು ತಯಾರಿ

ಬೆಂಗಳೂರು: ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಜುಲೈ 14ರವರೆಗೆ ನಡೆಯಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಾರಿ ಬಜೆಟ್‌ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. 8 ದಿನ ಪ್ರಶ್ನೋತ್ತರ ಕಲಾಪಕ್ಕೆ ಸಮಯ ನಿಗದಿಯಾಗಿದೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಅವಘಡ : ಸುಟ್ಟು ಭಸ್ಮವಾದ ನಗದು,ಚಿನ್ನಾಭರಣ

ಇಂದಿನ ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ‘ಗ್ಯಾರಂಟಿ’ಯೋಜನೆಗಳ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿಗಳಿಗೆ ಯಾವುದೇ ಷರತ್ತುಗಳನ್ನು ವಿಧಿಸದೇ ಇದೀಗ ಷರತ್ತುಗಳನ್ನು ವಿಧಿಸಿ ನೀಡುತ್ತಿರುವುದು ಎಷ್ಟು ಸರಿ ಎಂಬ ವಿಚಾರಗಳು ಚರ್ಚೆಗೆ ಬರಲಿದೆ.

ಸದನದ ಒಳಗೆ ಶಾಸಕರು ಮತ್ತು ಹೊರಗೆ ಬಿಎಸ್‌ ಯಡಿಯೂರಪ್ಪ ಹೋರಾಟ ನಡೆಸಿ ಕಾಂಗ್ರೆಸ್‌ಗೆ  ‘ಗ್ಯಾರಂಟಿ’ಗಳಿಂದಲೇ ಬಿಸಿ ಮುಟ್ಟಿಸಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಪ್ರಮುಖ ಅಸ್ತ್ರಗಳನ್ನ ವರ್ಗಾವಣೆ ದಂಧೆ, ಅನುದಾನ ಕಡಿತ, ಗುತ್ತಿಗೆದಾರರ ಬಿಲ್‌ಗೆ ತಡೆ, APMC ಕಾಯ್ದೆ ರದ್ದು, ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆರದ್ದತಿ ಸೇರಿದಂತೆ ಹಲವು ವಿಚಾರಗಳ ಜೊತೆಗೆ ಬಿಜೆಪಿ ಅವಧಿಯಲ್ಲಿನ ಕಾಯ್ದೆಗಳ ರದ್ದು ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿ ಹೋರಾಟಕ್ಕೆ ನಡೆಸಲು ವಿಪಕ್ಷಗಳೂ ಸಿದ್ಧತೆ ಮಾಡಿಕೊಂಡಿವೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES