Monday, December 23, 2024

ಹೆಚ್​ಡಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಬಸವರಾಜ ಬೊಮ್ಮಾಯಿ ಮತ್ತೊಂದು ಬಾಂಬ್ ಸಿಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಹುದ್ದೆಗೆ 30 ಲಕ್ಷ ದುಡ್ಡು ಕೇಳಿರಬೇಕು ಅಷ್ಟೇ ಎಂದು ಕುಟುಕಿದರು.

ಐಐಎಸ್, ಐಪಿಎಸ್ ವರ್ಗಾವಣೆ ಆಗಿ ಕ್ಯಾನ್ಸಲ್ ಆಗಿದೆ. ಹಲವಾರು ಬಾರಿ ಕ್ಯಾನ್ಸಲ್ ಆಗಿದೆ. ವರ್ಗಾವಣೆ ದಂಧೆಗೆ ಇದೇ ಸಾಕ್ಷಿ. ನಮ್ಮ ಅವಧಿಯಲ್ಲಿ ಸುಖಾ ಸುಮ್ಮನೆ ಆರೋಪ ಮಾಡಿದ್ರಿ. ಆಗ ಸಾಕ್ಷ್ಯ ಕೇಳಿದಾಗ ಕೊಡೋಕೆ ಆಗಲಿಲ್ಲ. ಬಿಟ್ ಕಾಯಿನ್ ವಿಚಾರ ತನಿಖೆ ಮಾಡಲಿ, ಒಳ್ಳೆಯದಾಗಲಿ ಎಂದು ಛೇಡಿಸಿದರು.

ಇದನ್ನೂ ಓದಿ : ಡಿಕೆಶಿ ರಾಜಾ ಹರಿಶ್ಚಂದ್ರನಿಗಿಂತ ಸತ್ಯವಂತರಿದ್ದಾರೆ : ಶಾಸಕ ಯತ್ನಾಳ್ ಪಂಚ್

ಈಗ 40% ಇಲ್ವಾ?

ನಮ್ಮ ವಿರುದ್ಧ ಆರೋಪ ಮಾಡಿದ್ರು. ಎಲ್ಲದ್ದಕ್ಕೂ ದಾಖಲೆ ಕೊಡೋಕೆ ಆಗುತ್ತಾ ಅಂತಿದ್ರು. ಈಗ ಯಾಕೆ ದಾಖಲೆ ಕೇಳ್ತಾ ಇದ್ದಾರೆ. 40 ಪರ್ಸೆಂಟ್.. 40 ಪರ್ಸೆಂಟ್ ಅಂತಿದ್ರಲ್ವಾ? ಈಗ 40% ಇಲ್ವಾ? ಕೆಲಸ ಮಾಡಿ ತೋರಿಸಲಿ. ಈಗ್ಯಾಕೆ ದಾಖಲೆ ಕೊಡಬೇಕು ನಿಮ್ಗೆ ಎಂದು ಗುಡುಗಿದರು.

ಕೋಟಿಗಟ್ಟಲೆ ನಡೆದಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಣಿಕತೆಯ ಬಗ್ಗೆ ಮಾತನಾಡುತ್ತಾ ಇದ್ದಾರೆ‌‌. ಸಣ್ಣ ಹುದ್ದೆಗೆ 30 ಲಕ್ಷ ಕೇಳಿರಬೇಕು ಅಷ್ಟೇ. ಇನ್ಮೇಲೆ ಎಲ್ಲಾ ವರ್ಗಾವಣೆ ಕೋಟಿಗಟ್ಟಲೆ ನಡೆದಿದೆ. ಎಸ್​ಐಟಿ , ಲೋಕಾಯುಕ್ತಾ ಯಾವ ತನಿಖೆಯನ್ನು ಬೇಕಾದ್ರೂ ಮಾಡಿಸಲಿ ಎಂದು ಸವಾಲೆಸೆದರು.

ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಮಾತನಾಡಿ, ನಾಳೆ ಅಧಿಕೃತವಾಗಿ ವಿಪಕ್ಷ ನಾಯಕನ ಆಯ್ಕೆಯಾಗಲಿದೆ ಎಂದು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES