Sunday, January 19, 2025

ಡ್ಯಾನ್ಸ್ ವಿಚಾರಕ್ಕೆ ಗಲಾಟೆ : ಚಾಕುವಿನಿಂದ ಇರಿದು ಪಿಯು ವಿದ್ಯಾರ್ಥಿಯ ಬರ್ಬರ ಹತ್ಯೆ

ಬೆಂಗಳೂರು : ಡ್ಯಾನ್ಸ್‌ ಮಾಡುವ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಶುರುವಾದ ಗಲಾಟೆ ವಿದ್ಯಾರ್ಥಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಮಂಜುನಾಥ್ ನಗರದ ಗೌತಮ್‌ ಕಾಲೇಜನ ಬಳಿ ಈ ಘಟನೆ ನಡೆದಿದೆ. ಸುಹೇಲ್ (17) ಕೊಲೆಯಾದ ಯುವಕ. ಈತ ಪ್ರಥಮ ಪಿಯುಸಿ ಓದುತ್ತಿದ್ದನು.

ಪ್ರಥಮ ಪಿಯುಸಿ ಓದುತ್ತಿದ್ದ ಸುಹೇಲ್ ಸೇರಿದಂತೆ ವಿದ್ಯಾರ್ಥಿಗಳ ನಡುವೆ ಡ್ಯಾನ್ಸ್‌ ಮಾಡುವ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿತ್ತು. ಈ ವೇಳೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ : ತಂದೆಯಿಂದಲೇ ಮಗನ ಕೊಲೆ : ಬೆಚ್ಚಿಬಿದ್ದ ಜನತೆ

ಚಿಕಿತ್ಸೆ ಫಲಕಾರಿಯಾಗದೇ ಸಾವು

ಚಾಕುವಿನಿಂದ ಇರಿದ ಪರಿಣಾಮ ಸುಹೇಲ್ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಒದ್ದಾಡಿದ್ದಾನೆ. ಬಳಿಕ, ಸ್ಥಳಕ್ಕೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿದ್ಯಾರ್ಥಿ ಸುಹೇಲ್ ನನ್ನು ಕೂಡಲೇ ಕಾಡೆ ಆಸ್ಪತ್ರೆ ಕೊಂಡೊಯ್ಯಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES