Tuesday, August 26, 2025
Google search engine
HomeUncategorizedಮಾಜಿ ಅಥ್ಲೀಟ್ ಬಿಂದುರಾಣಿಗೆ ಕೋಚ್​​ ಪತ್ನಿ ಆವಾಜ್​ ಹಾಕಿದ್ಯಾಕೆ ಗೊತ್ತಾ?

ಮಾಜಿ ಅಥ್ಲೀಟ್ ಬಿಂದುರಾಣಿಗೆ ಕೋಚ್​​ ಪತ್ನಿ ಆವಾಜ್​ ಹಾಕಿದ್ಯಾಕೆ ಗೊತ್ತಾ?

ಬೆಂಗಳೂರು: ಅಥ್ಲೀಟ್ ಬಿಂದು ರಾಣಿ (Athlete Bindu Rani) ಮೇಲೆ ಕೋಚ್ ಪತ್ನಿ ಶ್ವೇತಾಗೆ ಕಂಠೀರವ ಕ್ರೀಡಾಂಗಣದಲ್ಲಿ (Kantheerava Stadium) ಆವಾಜ್​​​ ಹಾಕಿರುವ ವಿಡಿಯೋ (Video Viral) ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್  ಆಗ್ತಿದೆ.

ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ಬಿಂದು ರಾಣಿ ಬಂದಾಗ ಕೋಚ್ ಶ್ವೇತಾ ಮನಸೋಯಿಚ್ಛೆ ನಿಂದಿಸಿ ಕಳ್ಳತನದ ಆರೋಪ ಮಾಡಿದ್ದಾರೆ. ಇದೇ ವೇಳೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ನಿರಂತರವಾಗಿ ಏಕವಚನದಲ್ಲಿ ಜೋರು ಜೋರಾಗಿ ಕೂಗಿ ವಾಗ್ದಾಳಿ ನಡೆಸಿದ್ದಾರೆ.

ಅಥ್ಲೀಟ್ ಬಿಂದು ರಾಣಿ ಮೇಲೆ ಕೋಚ್ ಶ್ವೇತಾ ಆವಾಜ್​ ವಿಡಿಯೋ ವೈರಲ್

TED ಕಾರ್ಯಕ್ರಮಕ್ಕೆ ಹೋಗಿದ್ದ ವಿಚಾರವಾಗಿ ಬಿಂದು ರಾಣಿ ಹಾಗೂ ಶ್ವೇತಾ ನಡುವೆ ಮಾತಿನ‌ ಚಕಮಕಿ ನಡೆದಿದ್ದು ಬಿಂದು ರಾಣಿಯನ್ನು ತಳ್ಳಾಡಿ ಚಪ್ಪಲಿ ತೋರಿಸಲಾಗಿದೆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಘಟನೆಗೆ ಕಾರಣವೇನು..?

ಬೆಂಗಳೂರಿನಲ್ಲಿ ಟೆಡ್​​ ಎಕ್ಸ್​ ಇನ್ಸ್​​ ಫಿರೇಷನಲ್​​​​ ಶೋ ಆಯೋಜನೆ ಮಾಡಲಾಗಿತ್ತು. ಈ ಟೆಡ್ ಶೋನಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ವಿರಾಟ್ ಕೋಹ್ಲಿ ಸೇರಿದಂತೆ ದೊಡ್ಡ ದೊಡ್ಡ ಸೆಲಬ್ರೆಟಿಗಳು ಭಾಗಿಯಾಗಿದ್ರು. ಇದರಲ್ಲಿ ಬಿಂದು ರಾಣಿಗೂ ಸಹ ಭಾಗಿಯಾಗಲೂ ಅವಕಾಶ ಸಿಕ್ಕಿತ್ತು. ಇದರಲ್ಲಿ ತಪ್ಪು ಮಾಹಿತಿ ಕೊಟ್ಟು ಅವಕಾಶ ಗಿಟ್ಟಿಸಿರೋದಾಗಿ ನಿಂದನೆ ಮಾಡಲಾಗಿತ್ತು. ಇದಕ್ಕಾಗಿ ಬಿಂದು ರಾಣಿ ಹಾಗೂ ಸೀನಿಯರ್ ಕೋಚ್ ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ನಡೆಸಿದ್ದಾರೆ.

ಏನಿದೆ ವಿಡಿಯೋದಲ್ಲಿ..?  

ಏನ್ ಮಾಡ್ತೀಯಾ? ನನಗೆ ಬೆದರಿಸ್ತಿಯಾ? ಫೋನ್ ಮಾಡಿಸ್ತೀಯಾ? ರೌಡಿಸಂ ಮಾಡ್ತೀಯಾ? ಬಂದಿದ್ದೀನಿ ಸ್ಟೇಡಿಯಂಗೆ ಏನ್ ಮಾಡ್ತೀಯಾ ಹೇಳಲೇ? ಯಾವ ಫ್ಲಾಟ್ ಫಾರಂನಲ್ಲಿ ಪ್ರಶ್ನೆ ಕೇಳಿದೀನಿ. ಅದೇ ಫ್ಲಾಟ್ ಫಾರಂನಲ್ಲಿ ಉತ್ತರ ಕೊಡಬೇಕು. ದೊಡ್ಡವರು ಇನ್ವಾಲ್ವ್ ಇದಾರಾ? ದೊಡ್ಡವರ ಕೈಲಿ ಫೋನ್ ಮಾಡಿಸ್ತೀಯಾ ಎಂದು ಶ್ವೇತಾ ಆವಾಜ್ ಹಾಕುತ್ತಾ ಏಯ್.. ಹೇಳೇ.? ಏನೇ ನಿಂದು ಫಾರ್ಪಾಮೆನ್ಸ್? ನಿಜ ಹೇಳು. ಸುಳ್ ಯಾಕೆ ಹೇಳ್ತಿದಿಯಾ ಎಲ್ಲರೂ ಕೇಳಲಿ. ಯಾಕೆ ಬಾಯಿ ಇಲ್ವಾ? ಎಲ್ಲಿ ಹೋಗ್ಬೇಕೋ ಅಲ್ಲಿಗೇ ಹೋಗ್ತೀವಿ. ಯಾಕೆ ಕರ್ನಾಟಕಕ್ಕೆ ಕೆಟ್ಟು ಹೆಸರು ತರ್ತಿದ್ದೀಯಾ? ಹೇಳೇ.. ಹೇಳು ಎಂದು ಜೋರಾಗಿ ಕೂಗಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಸೋಸಿಯೇಷನ್​ಗೆ ದೂರು ನೀಡಲು ಬಿಂದು ರಾಣಿ ಮುಂದಾಗಿದ್ದು, ಈ ಘಟನೆ ಕುರಿತು ಸಂಪಗಿರಾಮ ಪೊಲೀಸ್ ಠಾಣೆಗೆ ದೂರು ನೀಡಲು ಕೂಡ ಬಿಂದುರಾಣಿ ಮುಂದಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments