Wednesday, January 22, 2025

ಗಂಡನ ಕಥೆ ಮುಗಿಸಿದ ಪತ್ನಿ, ಸೇರಿ ಐವರ ಹೆಡೆಮುರಿ ಕಟ್ಟಿದ ಖಾಕಿ

ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕೆ ಗಂಡನು ಅಡ್ಡಿಯಾಗಿದ್ದಾನೆಂದು ಗಂಡನನ್ನೇ ವ್ಯವಸ್ಥಿತವಾಗಿ ಸಂಚಿನಿಂದ ಪತ್ನಿಯೇ ಕೊಲೆಯುಸಿರೆಳಿಸಿದ ಬೆಚ್ಚಿ ಬೀಳಿಸುವ ಘಟನೆ ಸಂಭವಿಸಿದೆ.

ಕಳೆದ ಜೂನ್ 29ರಂದು ಗೊಟ್ಟಿಗೆರೆ ಪಾಳ್ಯದ ನೈಸ್ ರಸ್ತೆಯ ಫ್ಲೈಓವರ್​ನ ಕೆಳಭಾಗದಲ್ಲಿ ಚನ್ನಪಟ್ಟಣ ಮೂಲದ ಅರುಣ್ (43) ಎಂಬುವವರ ಶವ ಪತ್ತೆಯಾಗಿತ್ತು.

ತಲಘಟ್ಟಪುರದಲ್ಲಿ ಜೂ.28ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೋಲಿಸರಿಗೆ ಪತ್ನಿಯೇ ಪತಿಗೆ ಖೆಡ್ಡಾ ತೋಡಿರುವ ಆತಂಕಕಾರಿ ಅಂಶಗಳು ಬಯಲಾಗಿವೆ.

ಇದನ್ನೂ ಓದಿ : ವಿಪಕ್ಷ ನಾಯಕನಿಲ್ಲದೆ ಕಲಾಪ ನಡೆಯುತ್ತಿರುವುದು ಇದೇ ಮೊದಲು : ಕಾಂಗ್ರೆಸ್‌ ಟೀಕೆ

ಪ್ರಿಯಕರ ಗಣೇಶನೊಂದಿಗೆ ಸೇರಿಕೊಂಡು ತನ್ನ ಪತಿ ಅರುಣ್ ಕೊಲೆಯನ್ನು ಪತ್ನಿ ರಂಜಿತಾ ಹಾಗೂ ಇನ್ನುಳಿದ ಐವರು ಸೇರಿ ಮಾಡಿರುವ ವಿಷಯ ಖಾಕಿಯ ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಿಯತಮನ ಜೊತೆ ಚಕ್ಕಂದವಾಡಲು ಪತಿಯೇ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ತಮ್ಮ ಲವ್ವಿಡವ್ವಿಗೆ ಅಡಚಣೆಯಾಗುತ್ತದೆ ಎಂದು ಕಟ್ಟಿಕೊಂಡ ಗಂಡನನ್ನೆ ಬರ್ಬರವಾಗಿ ಕೊಲೆ ಮಾಡಿಸಿ ನಾಟಕವಾಡಿದ್ದ ಕೊಲೆಗಾತಿ ಸೇರಿದಂತೆ ಐವರು ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಪೋಲಿಸರು ಯಶಸ್ವೀಯಾಗಿದ್ದಾರೆ.

RELATED ARTICLES

Related Articles

TRENDING ARTICLES