Wednesday, January 22, 2025

ಕೆಲ ಬಿಜೆಪಿಗರು ನಮ್ಮ ಪಕ್ಷಕ್ಕೂ ಬರಬಹುದು : ಸಚಿವ ತಿಮ್ಮಾಪೂರ ಹೊಸ ಬಾಂಬ್

ಬಾಗಲಕೋಟೆ : ಕೆಲ ಬಿಜೆಪಿಗರು ನಮ್ಮ ಪಕ್ಷಕ್ಕೂ ಬರಬಹುದು, ಬೇರೆ ಪಕ್ಷಕ್ಕಾದರೂ ಹೋಗಬಹುದು ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪೂರ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯಲ್ಲಿ ಒಳ ಬೇಗುದಿ ವಿಚಾರ ಕುರಿತು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಾಗ್ತಿಲ್ಲ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಅಸಮಾಧಾನ, ಮನಸ್ತಾಪ ಹೆಚ್ಚಿದೆ. ಬಿಜೆಪಿಯಲ್ಲಿ ಒಂದಕ್ಕೊಂದು ತಾಳಮೇಳ ಇಲ್ಲ. ಬಿಜೆಪಿಯಲ್ಲಿನ ಅಸಮಾಧಾನ ಯಾವ ಹಂತಕ್ಕೆ ತಲುಪುತ್ತೆ ಅಂತನೂ ಗೊತ್ತಿಲ್ಲ. ಬಿಜೆಪಿಯಲ್ಲಿ ಎಲ್ಲವಂತೂ ಸರಿ ಇಲ್ಲ. ಕೆಲ ಬಿಜೆಪಿಗರು ನಮ್ಮ ಪಕ್ಷಕ್ಕೂ ಬರಬಹುದು, ಬೇರೆ ಪಕ್ಷಕ್ಕಾದ್ರೂ ಹೋಗಬಹುದು ಎಂದು ಕುಟುಕಿದರು.

ಇದನ್ನೂ ಓದಿ : ಫ್ರೀ ಗ್ಯಾರಂಟಿ ಕೊಡೋದು ನನ್ನ ಪ್ರಕಾರ ಲಂಚ : ಸಂತೋಷ್ ಹೆಗ್ಡೆ

ಬಿಜೆಪಿಯಲ್ಲಿ ಯಾರು ಹ್ಯಾಪಿ ಆಗಿಲ್ಲ

ಬಿಜೆಪಿಯಲ್ಲಿ ಯಾರು ಹ್ಯಾಪಿ ಆಗಿಲ್ಲ, ಕಾದು ನೋಡೋಣ ಯಾರು ಎಲ್ಲೆಲ್ಲಿ ಬರ್ತಾರೆ. ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಸೇರಿ ಬಿಜೆಪಿಯಲ್ಲಿ 4ರಿಂದ 5 ಮಂದಿ ನಾಯಕರು ಇದ್ದಾರೆ. ಅವರು ಯಾವಾಗ ಏನೇನು ಮಾತನಾಡ್ತಾರೆ ಗೊತ್ತಿಲ್ಲ ಎಂದು ಸಚಿವ ತಿಮ್ಮಾಪೂರ ಹೇಳಿದರು.

ಆರೋಪ ವಿಚಾರ ನನ್ಗೆ ಗೊತ್ತಾಗಿದೆ

ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳಿಗೆ ಹೆಚ್ಚಿದ ಕಿರುಕುಳ ಆರೋಪ ವಿಚಾರ ಕುರಿತು ಮಾತನಾಡಿ, ಆರೋಪ ಯಾವ ವಿಚಾರಕ್ಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಿನ್ನೆ ಆ ಆರೋಪ ವಿಚಾರ ನನಗೆ ಗೊತ್ತಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡೋಣ. ಕೆಲವು ಆಡಳಿತಾತ್ಮಕ ವಿಚಾರ ಹೇಳಿದ್ದಾರೆ. ಇಲಾಖೆಯಲ್ಲಿನ ಕೆಲವು ತಪ್ಪುಗಳ ಬಗ್ಗೆ ಹೇಳಿದ್ದಾರೆ. ನಾನು ಅವುಗಳ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

RELATED ARTICLES

Related Articles

TRENDING ARTICLES