Monday, December 23, 2024

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗಧಿ

ಬೆಂಗಳೂರು : ಜುಲೈ 1ರಿಂದ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭವಾಗಿದ್ದು ಜುಲೈ 25 ರೊಳಗೆ ಅರ್ಜಿ ಸಲ್ಲಿಸಲು ಇಂಧನ‌ ಇಲಾಖೆ ಸೂಚನೆ ನೀಡಿದೆ.

ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆಯಾದ ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆ ಭರದಿಂದ ಸಾಗುತ್ತಿದೆ.‌ ಮತ್ತೊಂದೆಡೆ ಗೃಹಜ್ಯೋತಿ 200 ಯುನಿಟ್ ನ ಮೀಟರ್ ರೀಡಿಂಗ್ ಜುಲೈ 1ರಿಂದ ಆರಂಭವಾಗಿದೆ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಸಿಗಲಿದೆ.‌ ಜುಲೈ ತಿಂಗಳ ಬಿಲ್‌ ಬರುವ ಮುನ್ನ ಅರ್ಜಿ ಸಲ್ಲಿಸಬೇಕು‌ ಇಲ್ಲದಿದ್ದರೆ ವಿದ್ಯುತ್ ಬಿಲ್ ಹಣವನ್ನಸಂಪೂರ್ಣವಾಗಿ ಕಟ್ಟಲೇಬೇಕಾಗುತ್ತದೆ.

ಇದನ್ನೂ ಓದಿ: ಇನ್ನು ಎಷ್ಟು ದಿನ ಜನರನ್ನ ಭಿಕ್ಷುಕರ ರೀತಿ ಇಡ್ತೀರಾ? : ಕುಮಾರಸ್ವಾಮಿ ಕಿಡಿ

ಅದೇ ರೀತಿ ಆಗಸ್ಟ್ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ಆ ತಿಂಗಳಿಗೆ ಮಾಸಿಕ ಬಳಕೆಯ ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು ಎಂದು ಇಂಧನ ಇಲಾಖೆ ಸ್ಪಷ್ಟನೆ ನೀಡಿದೆ.

RELATED ARTICLES

Related Articles

TRENDING ARTICLES