ಮಂಡ್ಯ : ಫ್ರೀ ಯೋಜನೆ ಗಿಫ್ಟ್ ಕೊಡೋದು ನನ್ನ ಪ್ರಕಾರ ಲಂಚ ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕೀಯ ಪರಿಸ್ಥಿತಿ ಖಂಡಿತ ಬದಲಾಗಬೇಕು. ಜನತಾ ಸೇವೆ ಎನ್ನುವ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದರು.
ಜನಪ್ರತಿನಿಧಿಗಳಲ್ಲಿ ಹುದ್ದೆಯ ಲಾಭಕ್ಕಿಂತ ಸೇವೆ ಮಾಡುವ ವಿಚಾರ ಮೂಡಬೇಕು. ಅದರ ಹಿನ್ನಲೆ ಇಂದಿನ ವಿಚಾರ ಸಂಕೀರಣ ಕಾರ್ಯಕ್ರಮ ವಿಶೇಷವಾಗಿತ್ತು. ರಾಜಕೀಯ ಪಕ್ಷವಷ್ಟೇ ಅಲ್ಲ ಮತದಾರರು ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಜಾತಿ, ಧರ್ಮ, ಮತ ಎಲ್ಲವನ್ನು ಬಿಟ್ಟು ದೇಶ ಸೇವೆ ಮಾಡುವವರಿಗೆ ವೋಟು ಹಾಕಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಇನ್ನು ಎಷ್ಟು ದಿನ ಜನರನ್ನ ಭಿಕ್ಷುಕರ ರೀತಿ ಇಡ್ತೀರಾ? : ಕುಮಾರಸ್ವಾಮಿ ಕಿಡಿ
ಗಂಡಸ್ರು ಬೇರೆ ಬಸ್ ನಲ್ಲಿ ಹೊರಡ್ತಾರೆ
ಕಾಂಗ್ರೆಸ್ ಸರ್ಕಾರದ ಫ್ರೀ ಗ್ಯಾರಂಟಿ ಯೋಜನೆ ವಿಚಾರ ಕುರಿತು ಮಾತನಾಡಿ, ಈ ಫ್ರೀ ಯೋಜನೆ ಪರಿಣಾಮ 6 ತಿಂಗಳಲ್ಲಿ ತಿಳಿಯುತ್ತದೆ. ಮಹಿಳೆಯರು ಫ್ರೀ ಬಸ್ ನಲ್ಲಿ ಹೊರಟರೇ, ಗಂಡಸರು ಮತ್ತೊಂದು ಬಸ್ ನಲ್ಲಿ ಹೊರಡ್ತಾರೆ ಅನಿಸುತ್ತೆ ಎಂದು ಸಂತೋಷ್ ಹೆಗ್ಡೆ ನಯವಾಗಿಯೇ ಚಾಟಿ ಬೀಸಿದರು.
ಉಚಿತ ಗಿಫ್ಟ್ ಗಳಿಂದ ಅತ್ತೆ ಸೊಸೆ ನಡುವೆ ಜಗಳ ಕೂಡ ಆಗಬಹುದು. ಆರ್ಥಿಕ ಪರಿಸ್ಥಿರಿ ಬಹಳ ಗಂಭೀರವಾಗಬಹುದು. ಈಗಾಗಲೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ. ವಿದ್ಯುತ್ ಪ್ರೊಡಕ್ಷನ್ ಕಡಿಮೆ ಇದೆ ಎಂದು ಫ್ರೀ ಗ್ಯಾರಂಟಿ ಬಗ್ಗೆ ಬೇಸರ ಹೊರಹಾಕಿದರು.