ಬೆಂಗಳೂರು : ಇನ್ನು ಎಷ್ಟು ದಿನ ಜನರನ್ನು ಭಿಕ್ಷುಕರ ರೀತಿ ಇಡುತ್ತೀರಾ ಅಂತ ಪ್ರಶ್ನೆ ಮಾಡ್ತೀನಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಯಿಂದ ಜನ ಕೈ ಚಾಚುವಂತೆ ಮಾಡಿದ್ದೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು. ನಾನು ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ. ಸ್ವತಂತ್ರ ಬಂದು 70 ವರ್ಷ ಆಗಿದೆ. ಜನರನ್ನು ಇನ್ನೂ ಎಷ್ಟು ವರ್ಷ ಕೈ ಚಾಚುವಂತೆ ಮಾಡಿದ್ದೀರಿ. ಇಂಥ ಸಣ್ಣಮಟ್ಟದ ಸರ್ಕಾರದ ಆಸೆ ಆಮಿಷಗಳನ್ನು ಜನರಿಗೆ ಕೊಟ್ಟಿದ್ದೀರಿ ಎಂದು ಛೇಡಿಸಿದರು.
ಇದನ್ನೂ ಓದಿ : ಸತ್ಯ ಹೇಳಿದ್ರೆ ನಾನು ಮಠ ಸೇರಲ್ಲ! : ಕಾಂಗ್ರೆಸ್ ಸರ್ಕಾರದ ಉಳಿವಿನ ಬಗ್ಗೆ ಕೋಡಿ ಶ್ರೀ ಭವಿಷ್ಯ
ಸಿದ್ದರಾಮಯ್ಯ ಒಬ್ಬರೇನಾ ಇಲ್ಲಿ ಸಿಎಂ?
ಸಿದ್ದರಾಮಯ್ಯ ಅವರು ಒಬ್ಬರೇನಾ ಇಲ್ಲಿ ಮುಖ್ಯಮಂತ್ರಿ. ಸಿದ್ದರಾಮಯ್ಯ ಒಂದು ಹೇಳ್ತಾರೆ, ಸಚಿವ ಸತೀಶ್ ಜಾರಕಿಹೊಳಿ ಒಂದು ಹೇಳ್ತಾರೆ. ಇಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಇದ್ದೀರಾ ಹಾಗಾದ್ರೆ. ಇದನ್ನು ಸರ್ಕಾರ ಅಂತ ಕರೀತೀರಾ? ಎಂದು ಚಾಟಿ ಬೀಸಿದ್ದಾರೆ.
ಸರ್ಕಾರ ಬಂದು 50 ದಿನ ಆಯ್ತು
ಇಂದು ಸಭೆ ಕರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ರಚನೆಯಾಗಿ 50 ದಿನ ಆಗಿದೆ. ನಾವು ಹೇಗೆ ಸಂಘಟನೆ ಮಾಡಬೇಕು. ಇಂದು ಸಭೆಯಲ್ಲಿ ನಾಯಕರ ಅಭಿಪ್ರಾಯ ಕೇಳಲಾಗುತ್ತದೆ. ಅಧಿವೇಶನದಲ್ಲಿ ನಮ್ಮ ಪಕ್ಷದ ನಿಲುವೇನು. ಸರ್ಕಾರದ ನಡವಳಿಕೆಯಿಂದ ಜನರ ಅಭಿಪ್ರಾಯ ಏನು. ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು.