ಬೆಂಗಳೂರು : ಗೃಹಲಕ್ಷ್ಮೀ ಯೋಜನೆ ಜಾರಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಇದೇ ಜುಲೈ 14ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ.
ಗೃಹಲಕ್ಷ್ಮೀ ಜಾರಿಗೆ ಪ್ರತಿ ಜಿಲ್ಲೆಯಲ್ಲೂ ಪ್ರಜಾಪ್ರತಿನಿಧಿಗಳನ್ನ ನೇಮಕ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೂ 50ರಿಂದ 100 ಜನ ಪ್ರಜಾಪ್ರತಿನಿಧಿಗಳು ನೇಮಕವಾಗಲಿದ್ದಾರೆ. ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ EDCS ಡಿಪಾರ್ಟ್‌ಮೆಂಟ್ ಗೃಹಲಕ್ಷ್ಮೀ ಆ್ಯಪ್ ಸಿದ್ದಪಡಿಸಿದೆ.
ಪ್ರಜಾಪ್ರತಿನಿಧಿಗಳಾಗಿ ನೇಮಗೊಂಡವರ ಮೊಬೈಲ್‌ಗೆ ಆ್ಯಪ್ ಅಳವಡಿಕೆ ಚಿಂತನೆ ನಡೆಸಲಾಗುತ್ತಿದೆ. ಪ್ರಜಾಪ್ರತಿನಿಧಿಗಳು ನಿಮ್ಮ ಊರಿಗೆ ಬಂದು ಅರ್ಜಿ ಭರ್ತಿ ಮಾಡಲಿದ್ದಾರೆ. ಅರ್ಜಿ ಸ್ವೀಕಾರ ಜುಲೈ 14ರಿಂದ ಶುರುವಾಗಲಿದೆ. ಆಗಸ್ಟ್ 15ಕ್ಕೆ ಆಧಾರ್ ಜೋಡಣೆ ಆಗಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಹೆಸರಲ್ಲಿ ಗೋಲ್ ಮಾಲ್! : ಮಹಿಳೆಯರಿಂದ 150 ರೂ. ಕಮಿಷನ್?
2,000 ರೂ. ಸಹಾಯಧನ
ಯಾವುದೇ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೆ ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ಸಹಾಯಧನವನ್ನು ನೀಡಲಾಗುವುದು. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು.
ಬಿಪಿಎಲ್, ಎಪಿಎಲ್ ಕುಟುಂಬದ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಹಾಗೂ ಆಧಾರ್ ಕಾರ್ಡ್‌ನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು. ತನ್ನನ್ನು ಮನೆಯ ಯಜಮಾನಿ ಎಂದು ಘೋಷಿಸಿಕೊಳ್ಳಬೇಕು.