Tuesday, November 5, 2024

ಜಾತಿಗಣತಿ ನಿರ್ಧಾರ ಪಡೆದೆ ತೀರ್ತೆನೆ : ಸಿಎಂ ಸಿದ್ದರಾಮಯ್ಯ ಶಪಥ

ಬೆಂಗಳೂರು : ಸಾಮಾಜಿಕಕ ನ್ಯಾಯ ಕೊಡಬೇಕಾದರೆ ಜಾತಿ ಗಣತಿ ಅತ್ಯಂತ ಅವಶ್ಯಕವಾಗಿದೆ. ನಾನು ಎರಡನೇ ಬಾರಿಗೆ ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಸಿಎಂ ಆಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಪುನರುಚ್ಚರಿಸಿದರು.

ರಾಜ್ಯದಲ್ಲಿ ಕುರುಬ ಸಮಾಜ 7% ಇದೆ. ಸರಿಸುಮಾರು 49 ಲಕ್ಷದಷ್ಟಿದೆ ಇದೇ ಕಾರಣಕ್ಕೆ ಜಾತಿ ಮಾಡಿಸಿದ್ದೇನೆ ಅಲ್ಲದೆ ಹಿಂದುಳಿದ ವರ್ಗಗಳ ಬಗ್ಗೆ ಎಲ್ಲರಿಗೂ ಗೊತ್ತಾಗಲಿ ಎಂದು ಜಾತಿಗಣತಿ ಮಾಡಿಸಿದ್ದೆ ಎಂದರು.

ಸ್ವಾತಂತ್ರ್ಯ ಬಂದ ಬಳಿಕ ನಾವೇ ಮೊದಲು ಜಾತಿಗಣತಿ ಮಾಡಿಸಿದ್ದು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಈಗ ಬಿಹಾರ ಜಾತಿಗಣತಿಗೆ ಮುಂದಾಗಿದೆ, ನನ್ನ ಕಾಲದಲ್ಲಿ ಆಗ ಜಾತಿ ಗಣತಿಗೆ ಯಾರೂ ಸಿದ್ದರಿರಲಿಲ್ಲ ಆದರೆ ಕುಮಾರಸ್ವಾಮಿ ಕಾಲದಲ್ಲಿ ತಯಾರಾಗಿತ್ತು ಎಂದ ಅವರು ಪುಟ್ಟರಂಗಶೆಟ್ಟಿ ಆಗ ಮಂತ್ರಿಯಾಗಿದ್ದ ಅವನಿಗೆ ಹೇಳಿದ್ದೆ, ಕುಮಾರಸ್ವಾಮಿ ತೆಗೆದುಕೊಳ್ಳಬೇಡ ಅಂತ ಹೇಳಿದ್ರು ಎಂದು ಸಿದ್ದರಾಮಯ್ಯನವರು ಕುಮಾರಸ್ವಾಮಿ ಆಡಳಿತಾವಧಿಯನ್ನು ನೆನಪಿಸಿಕೊಂಡರು.

ಆದರೆ ನಾನು ಜಾತಿಗಣತಿ ತೆಗೆದುಕೊಂಡೆ ತಿರ್ತೇನೆ ಎಂದು ವೇದಿಕಯ ಮೇಲಿದ್ದ ಶಾಸಕ ಬಂಡೆಪ್ಪ ಖಾಶೆಂಪೂರ್ ಅವರ ಗಮನ ಸೆಳೆದರು.

ಇದನ್ನೂ ಓದಿ : ಏಕನಾಥ್ ಶಿಂಧೆ ಸರ್ಕಾರಕ್ಕೆ ಅಜಿತ್ ‘ಪವರ್’, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ

“ಸ್ವಲ್ಪ ಟೆಕ್ನಿಕಲ್ ಪ್ರಾಬ್ಲಂ ಇದೆ” ಆದರೂ ಅದನ್ನು ಸರಿಪಡಿಸಿ ಕಾನೂನು ಪ್ರಕಾರ ವರದಿ ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು. ತಮ್ಮ ರಾಜಕೀಯ ಹಾದಿಯ ಬಗ್ಗೆ  ಮಾತನಾಡಿದ ಸಿದ್ದರಾಮಯ್ಯನವರು, 1988ರಲ್ಲಿ  ಎಸ್ ಆರ್ ಬೊಮ್ಮಾಯಿ ಸರ್ಕಾರ ಇತ್ತು.

ನಾನು ಸಾರಿಗೆ ಸಚಿವನಾಗಿದ್ದೆ. ಆಗ ಕನಕದಾಸರ 500ನೇ ಜಯಂತೋತ್ಸವವನ್ನ ಎಲ್ಲಾ ಜಿಲ್ಲೆಗಳಲ್ಲಿ ಮಾಡಿದ್ವಿ, ಅಲ್ಲದೆ ಎಲ್ಲಾ ಜಿಲ್ಲೆಗಳ ಜಯಂತೋತ್ಸವದಲ್ಲಿ ನಾನು ಭಾಗಿಯಾಗಿದ್ದೆ ಎಂದರು.

ಕನಕ ಗುರುಪೀಠ ಮಾಡುವುದರಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂಬ ನಿರ್ಧಾರಕ್ಕೆ ಬಂದು 1989ರಲ್ಲಿ ಆಗ ನಾನೂ ಸೋತಿದ್ದೆ, ನನಗೂ ಕೆಲಸ ಇರಲಿಲ್ಲ ಎಲ್ಲಾ ಜಿಲ್ಲೆಗಳಿಗೂ ಹೋಗಬೇಕು ಎಂಬ ತೀರ್ಮಾನ ಮಾಡಿದೆ ಎಂದು ತಿಳಿಸಿದರು.

ಆಗ ನನ್ನದೊಂದು 777 ಸಂಖ್ಯೆಯ ಹಳೇ ಅಂಬಾಸಿಡರ್ ಕಾರ್ ಇತ್ತು ಆ ಕಾರಿನಲ್ಲಿ ಎಲ್ಲಾ ಜಿಲ್ಲೆಗಳು ಹೋಗಿದ್ದೆ ಎಂದ ಅವರು ಆ ಪೀಠಕ್ಕೆ ಹೆಚ್ ವಿಶ್ವನಾಥ್ ರನ್ನ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಕನಕ ಗುರು ಪೀಠದ ಸ್ಥಾಪನೆಯ ಗುಟ್ಟನ್ನು ಬಿಚ್ಚಿಟ್ಟರು.

ಕಾರ್ಯಕ್ರಮದಲ್ಲಿ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಮಾಜದ ಶಾಸಕರು ಸೇರಿದಂತೆ ಹಲವು ಸ್ವಾಮೀಜಿಗಳು,ಗಣ್ಯರು ಪಾಲ್ಗೊಂಡಿದ್ದರು.

RELATED ARTICLES

Related Articles

TRENDING ARTICLES