ಬೆಂಗಳೂರು : YST (ಯತಿಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಮಾತ್ರವಲ್ಲ. ಇನ್ನು ಒಂದು ಟ್ಯಾಕ್ಸ್ ಇದೆ. VST (ವೇಣುಗೋಪಾಲ್ ಸಿದ್ದರಾಮಯ್ಯ ಟ್ಯಾಕ್ಸ್ ) ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಛೇಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸರಿಯಾಗಿ ಹೇಳಿದ್ದಾರೆ. ಅವರಿಗೆ ಯಾವ ಯಾವ ರೀತಿ ಟ್ಯಾಕ್ಸ್ ಕಲೆಕ್ಟ್ ಆಗ್ತಿದೆ ಅನ್ನೋದು ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಅಧಿಕೃತ ಟ್ಯಾಕ್ಸ್ ಯಾವುದು, ಅನಧಿಕೃತ ಯಾವುದು ಅನ್ನೋ ಬಗ್ಗೆ ಕುಮಾರಸ್ವಾಮಿಯವರಿಗೆ ಗೊತ್ತಿದೆ. ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇದ್ದವರು. ಹಾಗಾಗಿ, ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿದೆ. Yst ಟ್ಯಾಕ್ಸ್ ಮಾತ್ರವಲ್ಲ, Vst ಟ್ಯಾಕ್ಸ್ ಬಗ್ಗೆಯೂ ಗೊತ್ತಿದೆ ಎಂದರು.
ಇದನ್ನೂ ಓದಿ : ವೈಎಸ್ಟಿ ತೆರಿಗೆ ಅಂತ ಇವರ ಸರ್ಕಾರದಲ್ಲಿ ಬಂದಿದೆ, ಪತ್ತೆ ಮಾಡ್ತಾ ಇದ್ದೀನಿ : ಹೆಚ್.ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ATMಗೆ ದುಡ್ಡು ಹಾಕ್ತಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿದ ಟ್ಯಾಕ್ಸ್ ಅನ್ನು ಕೆ.ಸಿ ವೇಣುಗೋಪಾಲ್ ರಿಸೀವ್ ಮಾಡ್ತಾರೆ. ಸಾಮಾನ್ಯವಾಗಿ ಎಟಿಎಂ(ATM)ಗೆ ಬ್ಯಾಂಕ್ ದುಡ್ಡು ಹಾಕುತ್ತಿದೆ. ಇಲ್ಲಿ ಸಿದ್ದರಾಮಯ್ಯ ಎಟಿಎಂ(ATM)ಗೆ ದುಡ್ಡು ಹಾಕ್ತಾರೆ. ವೇಣುಗೋಪಾಲ್ ಡ್ರಾ ಮಾಡ್ತಾರೆ. ಹೀಗಾಗಿ, ಇದು yst ಸರ್ಕಾರ ಮಾತ್ರ ಅಲ್ಲ. Vst (ವೇಣುಗೋಪಾಲ ಸಿದ್ದರಾಮಯ್ಯ ಟ್ಯಾಕ್ಸ್) ಸರ್ಕಾರ ಎಂದು ವಾಗ್ದಾಳಿ ನಡೆಸಿದರು.