Thursday, December 26, 2024

ಇಂದಿನಿಂದ ಬಿಜೆಪಿ ನಾಯಕರ ಕಣ್ಣಿಗೆ ನಿದ್ರೆನೇ ಹತ್ತಲ್ಲ : ಶಿವರಾಜ ತಂಗಡಗಿ

ಕೊಪ್ಪಳ : ಇಂದು ಒಂದು ಒಳ್ಳೆಯ ದಿನ, ಅನ್ನಭಾಗ್ಯ ಯೋಜನೆ ಜಾರಿಗೆ ಆಗಿದೆ. ಇದರಿಂದ ವಿರೋಧದ ಪಕ್ಷದವರ ಕಣ್ಣಿಗೆ ನಿದ್ರೆನೇ ಹತ್ತಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಕುಟುಕಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂದು ಒಬ್ಬ ವ್ಯಕ್ತಿಗೆ 170 ರೂಪಾಯಿ ನೀಡುತ್ತಿದ್ದೇವೆ. ಸಿಎಂ ಹಾಗೂ ಡಿಸಿಎಂ ಅವರು ಈ ನಿರ್ಧಾರ ಮಾಡಿದ್ದಾರೆ ಎಂದರು.

ನಾವು ಜನಪರ ಯೋಜನೆ ಜಾರಿ ಮಾಡಿದ್ದೇವೆ. ಅಕ್ಕಿ ಕೊಡದೆ ಇದ್ರೆ ದುಡ್ಡು ಅಕೌಂಟ್ ಗೆ ಹಾಕಿ ಅಂದವರು, ಈಗ ದುಡ್ಡು ಯಾಕೆ ಅಂತ ಮಾತನಾಡುತ್ತಿದ್ದಾರೆ. ಅಕ್ಕಿ ಸಿಗದೆ ಇರುವ ಹಾಗೆ, ಅಕ್ಕಿ ಕೊಡದೇ ಇರೋ ಹಾಗೆ ಮಾಡಿದವರೆ ಅವರು ಎಂದು ಛೇಡಿಸಿದರು.

ಇದನ್ನೂ ಓದಿ : ಸ್ವಯಂಘೋಷಿತ ಆರ್ಥಿಕ ತಜ್ಞರೇ, 15 ಕೆಜಿ ಅಕ್ಕಿ ಯಾವಾಗ ಕೊಡ್ತೀರಿ? : ನಳಿನ್ ಕುಮಾರ್ ಕಟೀಲ್

ಬಿಜೆಪಿಯವರು ದುಡ್ಡನ್ನು ತಿನ್ನಬಹುದು

ರಾಜ್ಯದ ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿ ಮಾಡ್ತೀವಿ. ಜನರು ದುಡ್ಡು ತಿನ್ನೋಕೆ ಆಗಲ್ಲ, ಬಿಜೆಪಿಯವರು ದುಡ್ಡನ್ನು ತಿನ್ನಬಹುದು. ನಾವು ಹಣ ನೀಡುವುದರಿಂದ ಜನರು ಬೇಕಾದನ್ನು ಖರೀದಿಸಬಹುದು. ನಾವು ದುಡ್ಡು ಕೊಡೋದು ಅಕ್ಕಿ ಸಿಗುವ ವರೆಗೂ ಮಾತ್ರ ಅಂತ ಹೇಳಿದ್ದೇವೆ. ಅಕ್ಕಿ ಸಿಕ್ಕ ಮೇಲೆ ದುಡ್ಡಿನ ಬದಲು ಅಕ್ಕಿ ಕೊಡ್ತೀವಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಏನೇ ಮಾಡಿದ್ರು ಬಿಜೆಪಿಗರಿಗೆ ತೃಪ್ತಿ ಆಗಲ್ಲ

ಬಿಜೆಪಿಯವರಿಗರ ಎಷ್ಟೆ ನೀಡಿದ್ರು ಸಮಾಧಾನ ಇಲ್ಲ. ಸಮಾಧಾನ ಇರದೇ ಇದ್ದವರಿಗೆ ಏನೇ ಮಾಡಿದ್ರು ತೃಪ್ತಿ ಆಗಲ್ಲ. ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡೋಕೆ ಆಗಲ್ಲ. ಇನ್ನೆರಡು ದಿನದಲ್ಲಿ ಅಧಿವೇಶನ ನಡೆಯತ್ತದೆ. ಈವರೆಗೂ ವಿಪಕ್ಷ ನಾಯಕರೇ ಇಲ್ಲ. ನಮ್ಮ ಪಕ್ಷದ ಬಗ್ಗೆ ಮಾತನಾಡೋಕೆ ಏನು ಯೋಗ್ಯತೆ ಇದೆ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES