Thursday, January 23, 2025

ತಂದೆಯಿಂದಲೇ ಮಗನ ಕೊಲೆ : ಬೆಚ್ಚಿಬಿದ್ದ ಜನತೆ

ದೇವನಹಳ್ಳಿ : ದಿನನಿತ್ಯ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಮಗನಿಗೆ ತಂದೆಯೇ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ವಾಣಿಗರಹಳ್ಳಿಯಲ್ಲಿ ಸಂಭವಿಸಿದೆ.

ನಿರಂತರವಾಗಿ ಕುಡಿದು ಗಲಾಟೆ ಮಾಡುತ್ತಿದ್ದ ಮಗ ಆದರ್ಶನ ಆಟಾಟೋಪಕ್ಕೆ ಬೇಸತ್ತು ನಿನ್ನೆ ರಾತ್ರಿ ಬಾರ್ ಬಳಿ ಮಗನನ್ನು ಥಳಿಸಿ ತಂದೆ ಜಯರಾಮಯ್ಯ (58) ತನ್ನ 28 ವರ್ಷದ ಮಗ ಆದರ್ಶನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ಸರ್ಕಾರದ ವಿರುದ್ದ ಸಿಡಿದೆದ್ದ 108 ಆಂಬ್ಯುಲೆನ್ಸ್ ಸಿಬ್ಬಂದಿ : ಪ್ರತಿಭಟನೆಯ ಎಚ್ಚರಿಕೆ

ಮಗನ ಕೈ ಕಾಲು ಕಟ್ಟಿ ತೋಟದ ಹಲಸಿನ ಮರಕ್ಕೆ ಬಿಗಿದು ತಂದೆ ಬೆಂಕಿ ಹಚ್ಚಿದ್ದಾನೆ. ಮಗನನ್ನು ಕೊಲೆಮಾಡಿರುವ ಆರೋಪಿ ತಂದೆಯನ್ನು ಪೋಲಿಸರು ಬಂಧಿಸಿದ್ದಾರೆ.

ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ದೊಡ್ಡಬೆಳವಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES