Saturday, December 28, 2024

Good News : 4,000 ಪೊಲೀಸ್ ಪೇದೆ, 400 ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿ ಕಾರ್ಯ ಶುರು

ಮೈಸೂರು : 4 ಸಾವಿರ ಪೊಲೀಸ್ ಪೇದೆ ಹಾಗೂ 400 ಸಬ್ ಇನ್ಸ್‌ಪೆಕ್ಟರ್ ಹುದ್ದೆ ಭರ್ತಿ ಮಾಡುವುದಕ್ಕೆ ಮುಂದಾಗಿದ್ದೇವೆ ಎಂದು ಗೃಹ ಸಚಿವ ಡಾ.‌ಜಿ. ಪರಮೇಶ್ವರ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಅದನ್ನು ಭರ್ತಿ ಮಾಡುವ ಕಾರ್ಯ ಶುರುವಾಗಿದೆ ಎಂದರು.

ಸಬ್ ಇನ್ಸೆಪೆಕ್ಟರ್ ಹುದ್ದೆ ನೇಮಕಾತಿ ಅಕ್ರಮ ವಿಚಾರ ಕುರಿತು ಮಾತನಾಡಿ, ಅಕ್ರಮ ಕುರಿತ ವಿಚಾರಣೆಯಲ್ಲಿ ನ್ಯಾಯಾಲಯ ಸರ್ಕಾರದ ಅಭಿಪ್ರಾಯ ಕೇಳಿದೆ. ನ್ಯಾಯಾಲಯಕ್ಕೆ ಜುಲೈ 5ನೇ ತಾರೀಖು ನಮ್ಮ‌ ಅಭಿಪ್ರಾಯ ಹೇಳುತ್ತೇವೆ ಎಂದು ಪರಮೇಶ್ವರ ತಿಳಿಸಿದರು.

ಇದನ್ನೂ ಓದಿ : ‘ಪೊಲೀಸ್ ಇಲಾಖೆಯನ್ನು ಕೇಸರಿಕರಣ’ ಮಾಡಲು ಹೊರಟಿದ್ದೀರಾ? : ಡಿಕೆಶಿ ಫುಲ್ ಗರಂ

ಪೊಲೀಸರಿಗೆ ವಾರದ ರಜೆ

ಔರಾದ್ಕರ್​ ವರದಿ ಯಾಥವತ್ ಜಾರಿಗೊಳಿಸುವುದು ಕಷ್ಟ. ಪೊಲೀಸರಿಗೆ ವಾರದ ರಜೆ ಕೊಡಬೇಕು, ಅದನ್ನು ಅನುಷ್ಠಾನ ಮಾಡುತ್ತೇನೆ. ರಾತ್ರಿ ಪಾಳಿ ಮಾಡಿದವರಿಗೆ ವಿಶೇಷ ಭತ್ಯೆ ಕೊಡುವ ವಿಚಾರದಲ್ಲೂ ಅದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಎಪಿಎಂಸಿ ಕಾಯ್ದೆ ವಿಚಾರವಾಗಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಾಸ್ ತೆಗೆದು ಕೊಳ್ಳುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES